ಉರಿ ಗೌಡ-ನಂಜೇ ಗೌಡ ಎಂದರೆ ಬೆಲೆ ಏರಿಕೆ: ಎಚ್.ಸಿ ಮಹದೇವಪ್ಪ ಟೀಕೆ

ಮೈಸೂರು ಮಾ.18 : `ಉರಿಗೌಡ ಎಂದರೆ ಪೆಟ್ರೋಲ್ ಬೆಲೆ ಏರಿಕೆ, ನಂಜೇಗೌಡ ಎಂದರೆ ಡೀಸೆಲ್ ಬೆಲೆ ಏರಿಕೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಉರಿಗೌಡ-ನಂಜೇಗೌಡ ಎಂಬ ಪಾತ್ರಗಳ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ಮಾಡಿರುವ ಅವರು, `ಉರಿಗೌಡ ಎಂದರೆ ಪೆಟ್ರೋಲ್ ಬೆಲೆ ಏರಿಕೆ, ನಂಜೇಗೌಡ ಎಂದರೆ ಡೀಸೆಲ್ ಬೆಲೆ ಏರಿಕೆ, ಉರಿಗೌಡ-ನಂಜೇಗೌಡ ಎಂದರೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಈ ಇಬ್ಬರೂ ಕೊಂದಿದ್ದು ಈ ದೇಶದ ಜನರನ್ನು, ಇದು ಸರಳ ಹಾಗೂ ವಿರಳವಾದ ಇತಿಹಾಸ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!