ಬಂಟ್ವಾಳ: 10 ವರ್ಷದ ಬಳಿಕ ಹುಟ್ಟಿದ ಮಗು ನೋಡಲು ಬರುತ್ತಿದ್ದಾಗ ಅಪಘಾತದಲ್ಲಿ ತಂದೆ ಮೃತ್ಯು

ಬಂಟ್ವಾಳ ಮಾ.18: ವಿವಾಹವಾಗಿ 10 ವರ್ಷದ ಬಳಿಕ ಹುಟ್ಟಿದ ಮಗುವನ್ನು ನೋಡಲು ಆಸ್ಪತ್ರೆಗೆ ಹೋರಟಿದ್ದ ತಂದೆ ಅಪಘಾತದಲ್ಲಿ  ಸಾವನ್ನಪ್ಪಿದ ಘಟನೆ ಮಾಣಿಯ ಬುಡೋಳಿಯಲ್ಲಿ ನಡೆದಿದೆ. 

ಮೃತರನ್ನು ಬುಡೋಳಿ ಪಾಟ್ರಕೋಡು ನಿವಾಸಿ ಫಾರೂಕ್(35) ಎಂದು ಗುರುತಿಸಲಾಗಿದೆ. ಫಾರೂಕ್ ಅವರಿಗೆ 10 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ.10 ವರ್ಷಗಳ ಬಳಿಕ ಮೊನ್ನೆಯಷ್ಟೇ ಅವರ ಪತ್ನಿಗೆ ಹೆರಿಗೆಯಾಗಿತ್ತು. ಮಗುವನ್ನು ನೋಡಲು ಖುಷಿಯಿಂದ ಫಾರೂಕ್ ಅವರು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುವಾಗ ದೇರಳಕಟ್ಟೆ ಆಸ್ಪತ್ರೆಯ ಬಳಿಯೇ ಅಪಘಾತವಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

1 thought on “ಬಂಟ್ವಾಳ: 10 ವರ್ಷದ ಬಳಿಕ ಹುಟ್ಟಿದ ಮಗು ನೋಡಲು ಬರುತ್ತಿದ್ದಾಗ ಅಪಘಾತದಲ್ಲಿ ತಂದೆ ಮೃತ್ಯು

Leave a Reply

Your email address will not be published. Required fields are marked *

error: Content is protected !!