ಮಾ.19- ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜನರ ಮುಂದೆ

ಉಡುಪಿ ಮಾ.17 (ಉಡುಪಿ ಟೈಮ್ಸ್ ವರದಿ): ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 5 ವರ್ಷಗಳಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಶಾಸಕ ಸುನೀಲ್ ಕುಮಾರ್ ಅವರು ರಿಪೋರ್ಟ್ ಕಾರ್ಡ್ ನ್ನು ಮಾ.19 ರಂದು ಸಂಜೆ 4.30ಕ್ಕೆ ಕುಕ್ಕುಂದೂರಿನ ಗ್ರಾಮ ಪಂಚಾಯತ್ ಮೈದಾನದಲ್ಲಿ ನೀಡುವುದಾಗಿ ಹೇಳಿದ್ದಾರೆ.

2018 ರಿಂದ 2023 ರ ವರೆಗಿನ ತಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಜನಪರ ಕಾಳಜಿ ಹೊಂದಿರುವ ಯೋಜನೆಗಳನ್ನು ತನ್ನ ಕ್ಷೇತ್ರ ವ್ಯಾಪ್ತಿಗೆ ತರುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಈ ಮೂಲಕ ಕಾರ್ಕಳದಲ್ಲಿ ಮನೆಮಾತಾಗಿರುವ ಶಾಸಕ ಸುನಿಲ್ ಕುಮಾರ್ ಅವರು ಸ್ವಾತಂತ್ರ್ಯ ಭಾರತದ ಆರು ದಶಕಗಳಲ್ಲಾಗದ ಕಾರ್ಯಗಳನ್ನು ಕೈಗೆತ್ತಿಕೊಂಡು ಕ್ರಿಯಾಶೀಲತೆ ಮತ್ತು ಜನಪರ ಕಾಳಜಿಯಿಂದ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಸಂಪರ್ಕ ಸಾಧಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ. 91 ಊರುಗಳಿಗೆ ವಿದ್ಯುತ್ ಸಂಪರ್ಕ, ಕುಗ್ರಾಮಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ ಮಾಡುವ ಸಲುವಾಗಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ 87 ಕೋಟಿ ಅನುದಾನ ತರಿಸಿದ ಕೀರ್ತಿ ಗಳಿಸಿದ್ದಾರೆ.

ಕಾರ್ಕಳ ತಾಲೂಕಿನ ಅತ್ಯಂತ ಕುಗ್ರಾಮಗಳ ಕಾಡಿನಲ್ಲಿ ಹತ್ತಾರು ವರ್ಷಗಳಿಂದ ಯಾರೂ ಗಮನ ಹರಿಸದ ಬಡ ಮಲೆಕುಡಿಯ ಜನಾಂಗದ ನೊವುಗಳನ್ನು ಆಲಿಸಿದ ಮೊದಲ ಶಾಸಕರಾಗಿದ್ದಾರೆ ಹಾಗೂ ನಕ್ಸಲ್ ಪೀಡಿತ ಪ್ರದೇಶದ ಜನರ ಬಳಿ ಸಾಗಿ ಅವರೊಂದಿಗೆ ಮುಕ್ತ ಚರ್ಚೆ ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಗಂಭೀರ ಪ್ರಯತ್ನ ಮಾಡಿದ ಕೀರ್ತಿ ಇವರದ್ದಾಗಿದೆ. ಅಲ್ಲದೆ ನೀರಿನ ಸಮಸ್ಯೆಯಿಂದ ಜನರು ಎಚ್ಚೆತ್ತು ಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಕ್ಷೇತ್ರವಿಡೀ ಜಾಗೃತಿ ಮೂಡಿಸುವ ಸಲುವಾಗಿ “ಒಂದು ಜನ-ಒಂದು ಸಸಿ, ಒಂದು ಮನೆ – ಒಂದು ಇಂಗುಗುಂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ಹಳ್ಳಿ ಹಳ್ಳಿಗಳನ್ನು ಸಂಚರಿಸಿ, ಯುವಕರನ್ನು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿದ ದೇಶದ ಮೊದಲ ಪರಿಸರ ಸ್ನೇಹಿ ಶಾಸಕ ಎಂಬ ಬಿರುದು ಪಡೆದುಕೊಂಡಿದ್ದಾರೆ.

40 ಕೋಟಿಗೂ ಹೆಚ್ಚು ಅನುದಾನವನ್ನು ಬಳಸಿಕೊಂಡು 50ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿ, ರೈತರ ಬೆಳೆಗಳಿಗೆ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ವದಗಿಸಿ ರೈತಮಿತ್ರ ಶಾಸಕರಾಗಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಕಳದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಮಿಯ್ಯಾರಿನ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಾರ್ಕಳ ತಾಲೂಕಿನ ಬಹುತೇಕ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಪುನಶ್ಚೇತನ. ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್ ನಿರ್ಮಾಣ. ಕಾರ್ಕಳ ಹಿರಿಯಂಗಡಿ ಬಳಿ ಅರುವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಇವರ ಕ್ಷೇತ್ರದ ಬಗೆಗಿನ ಕಾಳಜಿಗೆ ಹಿಡಿದ ಕೈಗನ್ನಡಿಯಂತಿದೆ.

ಬಡರೋಗಿಗಳಿಗೆ ಅತ್ಯುತ್ತಮ ಸೇವೆ ಲಭ್ಯವಾಗಬೆಕೆಂಬ ಕಾರಣಕ್ಕಾಗಿ ಆರ್. ಅಶೋಕ್ ರವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ ವ್ಯವಸ್ಥೆಗಳನ್ನು ಕಲ್ಪಸಿದ್ದು. ಇದೀಗ 6 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ. ಮಿಯ್ಯಾರಿನಲ್ಲಿ 120 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರಾಂಗಣ ರಚನೆಯಾಗಿದೆ. ಇತ್ತೀಚೆಗೆ ಜವುಳಿ ಪಾರ್ಕ್‍ಗೆ ಶಂಕುಸ್ಥಾಪನೆ. ಜೊತೆಗೆ ಜಿಲ್ಲೆಯಲ್ಲಿ ಕನ್ನಡ ರಾಜೋತ್ಸವದ ಸಲುವಾಗಿ ರಾಜ್ಯಾದ್ಯಂತ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವು ಯಶಸ್ವಿಯಾಗುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.

ಕಾರ್ಕಳ ತಾಲೂಕಿನಾದ್ಯಂತ ಬದಲಾದ ಸುಂದರವಾದ ರಸ್ತೆಗಳು. ಪುಲ್ಕೆರಿ ಜಂಕ್ಷನ್‍ನಿಂದ ಜೋಡುರಸ್ತೆಯನ್ನು ಸಂಪರ್ಕಿಸುವ ರಸ್ತೆ, ಬೈಲೂರಿನ ರಸ್ತೆ ಹೀಗೆ ಕ್ಷೇತ್ರದಾದ್ಯಂತ ಅನೇಕ ರಸ್ತೆ ಅಭೀವೃದ್ಧಿ ಕಾಮಗಾರಿಗಳು, ಕೇಂದ್ರ ಸರಕಾರದ 39 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ-ಸಾಣೂರು-ಬೆಳುವಾಯಿಯನ್ನು ಸಂಪರ್ಕಿಸುವ ರಸ್ತೆ, 29 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ-ಬಜಗೋಳಿ-ಮಾಳಗಳನ್ನು ಸಂಪರ್ಕಿಸುವ ರಸ್ತೆಗಳು ಅತ್ಯಂತ ಕಡಿಮೆ ಅವದಿಯಲ್ಲಿ ನಿರ್ಮಿಸಿರುವುದು ಶಾಸಕರು ಕ್ಷೇತ್ರದ ಪ್ರಗತಿಯ ಬಗೆಗೆ ಹೊಂದಿರುವ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ.

ಕ್ರೀಡೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಕಾರ್ಕಳ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳ ನಿರ್ಮಿಸುವಲ್ಲಿ ಎಡೆಬಿಡದ ಪ್ರಯತ್ನ. ಕ್ರೀಡಾಸಕ್ತರಿಗಾಗಿ ಈಜುಕೊಳದ ನಿರ್ಮಾಣ. ಯಶಸ್ವಿ ಕಾರ್ಕಳ ಉತ್ಸವ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣ ಮೂಲಕ ನಾಡು-ನುಡಿ ಮತ್ತು ಗ್ರಾಮೀಣ ಸಂಸ್ಕೃತಿಯ ಬಗೆಗೆ ವಿಶೇಷ ಒಲವು ಹೊಂದಿರುವ ಶಾಸಕರೆನಿಸಿಕೊಂಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಶಾಸಕರ ಅವಧಿಯಲ್ಲಿ ಇನ್ನೂ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಈ ಎಲ್ಲಾ ಕಾರ್ಯಗಳ ಸಮಗ್ರ ಮಾಹಿತಿಯ ರಿಪೋರ್ಟ್ ಕಾರ್ಡ್‍ನ್ನು ಮಾ.19 ರಂದು ಶಾಸಕರು ಜನತೆಯ ಮುಂದಿಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!