ಆಕ್ಸ್ ಫರ್ಡ್ ವಿ ವಿಯ ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷೆ ಹುದ್ದೆಗೆ ರಶ್ಮಿ ಸಾವಂತ್ ರಾಜೀನಾಮೆ
ಲಂಡನ್: ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್‍ನ ಅಧ್ಯಕ್ಷೆಯಾಗಿ ಇತ್ತೀಚೆಗೆ ಆಯ್ಕೆಯಾಗಿದ್ದ ಮಣಿಪಾಲ ಮೂಲದ ರಶ್ಮಿ ಸಾಮಂತ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿಮಾಡಿದೆ.
ರಶ್ಮಿ ಸಾಮಂತ್ ಅವರು ಈ ಪ್ರತಿಷ್ಟಿತ ಹುದ್ದೆಗೆ ಆಯ್ಕೆಯಾದ ಪ್ರಥಮ ಭಾರತೀಯ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ‘ಜನಾಂಗೀಯ’ ಮತ್ತು ಸಂವೇದನಾರಹಿತ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಈ ಹಿಂದಿನ ಪೋಸ್ಟ್ ಗಳು ವಿವಾದ ಸೃಷ್ಟಿಸುತ್ತಿದ್ದಂತೆಯೇ ಬಹಿರಂಗ ಪತ್ರ ಬರೆದ ರಶ್ಮಿ ಅವರು, ಪತ್ರದ ಆರಂಭದಲ್ಲಿ ಕ್ಷಮೆಯಾಚಿಸಿದ್ದರೂ, ಆಕೆ ರಾಜೀನಾಮೆ ನೀಡಬೇಕೆಂಬ ಬೇಡಿಕೆಗಳು ತಗ್ಗದೇ ಇದ್ದಾಗ ರಶ್ಮಿ ಫೆ. 16 ರಂದು ತಾನು ಆಯ್ಕೆಯಾದ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಹುದ್ದೆಯನ್ನು ತ್ಯಜಿಸುವುದಾಗಿ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ
ಫೆ.17 ರಂದು ಭಾರತಕ್ಕೆ ಮರಳಿ ಬರಲು ವಿಮಾನವೇರುವ ಮುನ್ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, “ಇನ್ ಸ್ಟಾಗ್ರಾಂ ನನ್ನ ಪ್ರಚಾರಾಭಿಯಾನದ ಪುಟವಾಗಿದ್ದರಿಂದ ಎಲ್ಲರೂ ಅದನ್ನು ನೋಡಿದ್ದರು. ನನ್ನ ಹಿಂದಿನ ಪೆÇೀಸ್ಟ್ ಗಳನ್ನು ನೋಡಲು ಬಹಳಷ್ಟು ಸ್ಕ್ರೋಲ್ ಡೌನ್ ಮಾಡಬೇಕಿತ್ತು. ಯಾರು ಅವುಗಳನ್ನು ಕಂಡರೋ ತಿಳಿದಿಲ್ಲ. ನಾನು ಯಾರ ಕುರಿತೂ ತೀರ್ಪು ನೀಡಲು ಬಯಸುವುದಿಲ್ಲ, ಹಾಗೆ ಮಾಡಿದಾಗ ಎಷ್ಟು ನೋವಾಗುತ್ತದೆಯೆಂದು ನನಗೆ ಗೊತ್ತು.” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ನನಗೆ ಬಹಳಷ್ಟು ಅನಾಮಿಕ ಇಮೇಲ್‍ಗಳು ಬಂದಿವೆ. ಯಾರಿಗೆ ನೋವಾಗುವುದಿಲ್ಲ ಹೇಳಿ ಯಾರಿಗಾದರೂ ಏನಾದರೂ ಒಳ್ಳೆಯದಾದಾಗ ಅದನ್ನು ಕಿತ್ತುಕೊಳ್ಳಬಹುದಾಗಿದೆ ಎಂಬ ಕಥೆಗಳನ್ನು ಕೇಳಿದ್ದರಿಂದ ಇಂತಹ ಒಂದು ಬೆಳವಣಿಗೆಯನ್ನು ನಿರೀಕ್ಷಿಸಿದ್ದೆ. ನಾನು ಯಾವುದೇ ಸಮುದಾಯವನ್ನು ದ್ವೇಷಿಸುವುದಿಲ್ಲ. ನಾನೊಬ್ಬ ಕೆಟ್ಟ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಿದ್ದಾರೆ, ನಾನು ಹಾಗಿಲ್ಲ,” ಎಂದು ಹೇಳಿದ್ದಾರೆ.
ಸದ್ಯ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ರಶ್ಮಿ ಡಿಆಕ್ವಿವೇಟ್ ಮಾಡಿದ್ದಾರೆ. ಟೀಕಾಕಾರರು ಎತ್ತಿ ತೋರಿಸಿರುವ ಒಂದು ಪೆÇೀಸ್ಟ್ ನಲ್ಲಿ ರಶ್ಮಿ 2017ರಲ್ಲಿ ಬರ್ಲಿನ್ ಹೊಲೋಕಾಸ್ಟ್ ಸ್ಮಾರಕದೆದುರು ನಿಂತಿರುವ ಫೆÇೀಟೋ ಇದೆ. ಅದಕ್ಕೆ ಆಕೆ ನೀಡಿದ ವಿವರಣೆ ಹೀಗಿತ್ತು. “ಈ ಸ್ಮಾರಕ ಹಿಂದಿನ ದೌರ್ಜನ್ಯಗಳ ಮತ್ತು ಕೃತ್ಯಗಳ ‘ಠೊಳ್ಳು’ ಕನಸನ್ನು ತೋರಿಸುತ್ತದೆ,” ಎಂದು ಬರೆದಿದ್ದರು.
ತಮ್ಮ ಪೋಸ್ಟ್‍ಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇದು ನನ್ನ ಮೊದಲ ಯುರೋಪ್ ಪ್ರವಾಸವಾಗಿತ್ತು.”ನಾನು ಚಿಕ್ಕವಳಾಗಿದ್ದೆ ಹಾಗೂ ಹೆಚ್ಚು ತಿಳಿದಿರಲಿಲ್ಲ. ನಾನೇನೂ ಅಸಂವೇದಿತನ ವ್ಯಕ್ತಪಡಿಸಿಲ್ಲ. ನಾನು ದೇಶೀಯ ಆಂಗ್ಲ ಭಾಷಿಕಳಲ್ಲ ನಾನು ಪದಗಳಲ್ಲಿ ಸ್ವಲ್ಪ ವಿಡಂಬನೆಯನ್ನು ಸೇರಿಸಲು ಯತ್ನಿಸುತ್ತಿದ್ದೆ,” ಎಂದು ಹೇಳಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ ಆಕೆ ಮಲೇಷ್ಯಾದ ಬೌದ್ಧ ದೇವಳವೊಂದರ ಎದುರು ನಿಂತಿರುವ ಚಿತ್ರವಿದ್ದು ಅದರ ಕೆಳಗೆ ಆಕೆ ‘ಚಿಂಗ್ ಚ್ಯಾಂಗ್’ ಎಂದು ಬರೆದಿರುವುದು ಚೀನೀ ಮೂಲದ ವಿದ್ಯಾರ್ಥಿಗಳನ್ನು ಅವಹೇಳನ ಮಾಡಿದಂತಾಗಿದೆ ಎಂಬಂತೆ ಬಿಂಬಿಸಲಾಗಿದೆ. ತಾನು ಮಲೇಷ್ಯನ್ನರನ್ನು ಉಲ್ಲೇಖಿಸಿ ಬರೆದಿಲ್ಲ, ಬದಲು “ಗಿಡಗಳನ್ನು ತಿನ್ನುವುದು” ಎಂಬ ಅರ್ಥದಲ್ಲಿ ಬರೆದಿದ್ದೆ. “ನಾನು ನಮಸ್ತೆ ಮಾಡುವ ಚಿತ್ರ ಅದು. ನಾನು ಸಸ್ಯಾಹಾರಿ ಹಾಗೂ ಅಲ್ಲಿ ಸಸ್ಯಾಹಾರಿ ಆಹಾರ ಹುಡುಕುವುದು ಕಷ್ಟವಾಗಿದ್ದರಿಂದ ಸ್ವಲ್ಪ ತಮಾಷೆಯೆಂಬಂತೆ ಕಂಡಿತು,” ಎಂದು ರಶ್ಮಿ ಹೇಳಿದ್ದಾರೆ.
ರಶ್ಮಿ ಅವರು, ಮಣಿಪಾಲ ಮತ್ತು ಉಡುಪಿಯಲ್ಲಿ ಶಾಲಾ ಶಿಕ್ಷಣ ಪಡೆದಿರುವ ರಶ್ಮಿ ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದು ಪ್ರಸ್ತುತ ಆಕ್ಸ್ ಫರ್ಡ್ ವಿವಿಯ ಲಿನಾಕರ್ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ವಿಷಯದಲ್ಲಿ ಎಂಎಸ್ಸಿ ಶಿಕ್ಷಣ ಪಡೆಯುತ್ತಿದ್ದಾರೆ