ವಿಶ್ವಸಂಸ್ಥೆಯಲ್ಲಿ ಕಾಂತಾರ ಪ್ರದರ್ಶನ: ಕನ್ನಡದಲ್ಲೇ ರಿಷಬ್ ಶೆಟ್ಟಿ ಭಾಷಣ

ಬೆಂಗಳೂರು ಮಾ.16 : ದೇಶದಾದ್ಯಂತ ಭರ್ಜರಿ ಯಶಸ್ಸು ಕಂಡ ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ನಾಳೆ  ಜಿನೇವಾದಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಪ್ರದರ್ಶನ ಕಾಣಲಿದೆ. 

ಈ ಹಿನ್ನೆಲೆಯಲ್ಲಿ ರಿಷಭ್‌ ಶೆಟ್ಟಿಯವರು ಈಗಾಗಲೇ ಸ್ವಿಜರ್ಲೆಂಡ್‌ನ‌ ಜಿನೇವಾಗೆ ಪ್ರಯಾಣ ಬೆಳೆಸಿದ್ದು, ವಿಶ್ವ ಸಂಸ್ಥೆಯ ಹಾಲ್‌ ನಂ.13(ಪಾಥೇ ಬಾಲೆಕ್ಸೆರ್ಟ್‌) ನಲ್ಲಿ ವಿಶ್ವಸಂಸ್ಥೆಯ ಸದಸ್ಯರೊಂದಿಗೆ ನಾಳೆ ಸಿನಿಮಾ ವೀಕ್ಷಿಸಲಿದ್ದಾರೆ.

ಇನ್ನು ಜಿನೇವಾದಲ್ಲಿ ಸಿನಿಮಾ ಪ್ರದರ್ಶನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ರಿಷಭ್ ಶೆಟ್ಟಿ ಯವರು ಚಿತ್ರ ಪ್ರದರ್ಶನದ ಬಳಿಕ  ಈ ಚಿತ್ರಕ್ಕೂ ಮತ್ತು ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಮಾತನಾಡಲಿದ್ದಾರೆ. ಅದರಲ್ಲೂ ದೂರದ ರಾಷ್ಟ್ರದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತನಾಡಲಿದ್ದಾರೆ. ಬಳಿಕ ವಿಶ್ವಸಂಸ್ಥೆ ರಾಜತಾಂತ್ರಿಕರ ಜತೆ ಖಾಸಗಿ ಡಿನ್ನರ್‌ ನಲ್ಲಿಯೂ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!