ಡೆತ್ ನೋಟ್ ಬರೆದಿಟ್ಟು ಗಂಜಿಮಠ ಗ್ರಾ.ಪಂ ಸದಸ್ಯ ನೇಣಿಗೆ ಶರಣು
ಕುಪ್ಪೆಪದವು ಮಾ.16: ಡೆತ್ ನೋಟ್ ಬರೆದಿಟ್ಟು ಗಂಜಿಮಠ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯ ಸಂದೀಪ್ ಶೆಟ್ಟಿ ಮೊಗರು ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿ ನಡೆದಿದೆ.
ಸಂದೀಪ್ ಶೆಟ್ಟಿ ಮೊಗರು (35) ಅವರು ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದರು. ಅವರನ್ನು ಹುಡುಕಾಟ ನಡೆಸಿದಾಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿರುವ ತನ್ನ ಕಟೀಲೇಶ್ವರಿ ಸೇವಾ ಸಿಂದು ಕಚೇರಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ವ್ಯಾವಹಾರಿಕ ಸಮಸ್ಯೆ ಗಳು ಆತ್ಮಹತ್ಯೆಗೆ ಕಾರಣವೆನ್ನಲಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು 9ಮತ್ತು 10 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಸಂದೀಪ್ ಶೆಟ್ಟಿ ಅವರು ಸೇವಾ ಸಿಂದು ಕೇಂದ್ರ ನಡೆಸುತ್ತಿದ್ದರು. ಅವಿವಾಹಿತ ಸಂದೀಪ್ ಶೆಟ್ಟಿ ಅವರು ಇನ್ಶೂರೆನ್ಸ್ ಏಜೇಂಟರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.