ಕರಿ ಬೇವು ಚಟ್ನಿ ಪುಡಿ
ವಿದ್ಯಾವತಿ ಅಡಿಗ , ಬೆಂಗಳೂರು
ಬಾಯಿಯಲ್ಲಿ ನೀರೂರಿಸುವ ಚಟ್ನಿ ಪುಡಿ ಮೊಸರನ್ನದ ಜೊತೆ ಸೂಪರ್ ಕಾಂಬಿನೇಶನ್, ರೊಟ್ಟಿ ಜೊತೆ ,ಬಿಸಿ ಬಿಸಿ ಬೆಳ್ತಿಗೆ ಅನ್ನದ ಜೊತೆ ಕಲಸಿ ತಿಂದರಂತೂ ಅದ್ಭುತ ರುಚಿ,
ಮನೆಯಲ್ಲಿ ಸುಲಭವಾಗಿ ಸಿಗುವ ಬೇರೆ ಬೇರೆ ಪದಾರ್ಥಗಳನ್ನು ಬಳಸಿ ಚಟ್ನಿ ಪುಡಿ ಗಳನ್ನೂ ತಯಾರಿಸಬಹುದು.
ಒಗ್ಗರಣೆಗೆ ಬಳಸುವ ಕರಿಬೇವಿನ ಚಟ್ನಿ ಪುಡಿ ಮಾಡುವುದು ಸುಲಭ ಹಾಗೂ ಆರೋಗ್ಯಕ್ಕೂ ಉತ್ತಮ. ಕರಿಬೇವಿನ ಚಟ್ನಿ ಪುಡಿ ಪಾಕ ಟೈಮ್ಸ್ ಲಿ ನಿಮಗಾಗಿ…
ಕರಿಬೇವಿನ ಚಟ್ನಿ ಪುಡಿ
ಬೇಕಾದ ಸಾಮಗ್ರಿ
ಕಡಲೆ ಬೇಳೆ -1 1 /4 ಕಪ್
ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1 ಮುಷ್ಟಿ
ಒಣ ಮೆಣಸು- 20
ಘಾಟಿ ಮೆಣಸು- 6
ಕೊಬ್ಬರಿ -1 / 4 ಕಪ್
ಕೊಬ್ಬರಿ ಎಣ್ಣೆ ಹುರಿಯಲು ಅಗತ್ಯವಿರುವಷ್ಟು
ಕರಿಬೇವು – 1 ಕಪ್
ಹುಣಸೆ ಹಣ್ಣು – ನಿಂಬೆ ಗಾತ್ರ
ಉಪ್ಪು- ರುಚಿಗೆ ತಕ್ಕಷ್ಟು
ಬೆಲ್ಲ- ಸ್ವಲ್ಪ
ಇಂಗು -ಸ್ವಲ್ಪ
ತಯಾರಿಸುವ ವಿಧಾನ – ಹುರಿದುಕೊಳ್ಳಲು ಬಾಣಲೆಯನ್ನು ಬಿಸಿ ಮಾಡಿಕೊಂಡು 2 ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ,ಅದಕ್ಕೆ ಉದ್ದಿನ ಬೇಳೆ , ಕಡಲೆಬೇಳೆಯನ್ನ ಹುರಿದುಕೊಂಡು ನಂತರ ಬಿಸಿ ಎಣ್ಣೆಗೆ ಸ್ವಲ್ಪ ಇಂಗು ಹಾಕಿ ಹುರಿಯಿರಿ ನಂತರ ತುಂಡರಿಸಿದ ಒಣಮೆಣಸು ಹೀಗೆ ಒಂದೊಂದಾಗಿ ಹುರಿದ ಮೇಲೆ ಕೊನೆಯಲಿ ಹುಣಸೆಹಣ್ಣು, ಬೆಲ್ಲ, ಉಪ್ಪು ಕೊಬ್ಬರಿ ಬೇರೆಬೇರೆಯಾಗಿ ಹುರಿದು ಈ ಮಿಶ್ರಣ ತಣಿದ ಮೇಲೆ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಂಡರೆ ರುಚಿಯಾದ ಚಟ್ನಿ ಪುಡಿ ಸಿದ್ದ.
ವಿದ್ಯಾವತಿ ಅಡಿಗ , ಬೆಂಗಳೂರು