ಉಡುಪಿ: ಮಾ.24-ಕಡಿಯಾಳಿ ದೇವಳದ ಧ್ವಜ ಪ್ರತಿಷ್ಠೆ, ಧೂಳಿ ಮಂಡಲ ಸೇವೆ
ಉಡುಪಿ ಮಾ.15 (ಉಡುಪಿ ಟೈಮ್ಸ್ ವರದಿ): ಕಡಿಯಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಧ್ವಜಸ್ಥಂಭ ಪ್ರತಿಷ್ಠಾಪನೆ ಮತ್ತು ವ್ಯಾಘ್ರ ಪಿಲಿಚಾಮುಂಡಿ ದೈವದ ಜೀರ್ಣೋದ್ಧಾರ ಮತ್ತು ಧೂಳಿ ಮಂಡಲ ಸೇವೆ ಮಾ. 24ರಂದು ಬೆಳಿಗ್ಗೆ 6 ಗಂಟೆಯಿಂದ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ವಿ ಆಚಾರ್ಯ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಾ.24 ರಂದು ಬೆಳಿಗ್ಗೆ 6:00 ಗಂಟೆಯಿಂದ ಪುಣ್ಯಾಹವಾಚನ, ಗಣಯಾಗ ನಡೆಯಲಿದೆ. 7 ಗಂಟೆಗೆ ದ್ವಜ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಬೆಳಿಗ್ಗೆ 9.45 ಕ್ಕೆ ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ, ನಾಗಸನ್ನಿಧಿಯಲ್ಲಿ ಕಲಶಾಭಿಷೇಕ ಆಶ್ಲೇಷ ಬಲಿ ಹಾಗೂ ಮಹಾಪೂಜೆ ನಡೆಯಲಿದೆ. ಬಳಿಕ ಸಂಜೆ 5 ಗಂಟೆಯಿಂದ ಹಾಲಿಟ್ಟು ಸೇವೆ, ಧೂಳಿ ಮಂಡಳ ಸೇವೆ ನಡೆಯಲಿದ್ದು, ರಾತ್ರಿ ಸಣ್ಣರಂಗ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಹಾಗೂ ಮಧ್ಯಾಹ್ನ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗಾಗಿ ಮಹಾ ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಅಧ್ಯಕ್ಷ ನಾಗೇಶ್ ಹೆಗ್ಡೆ, ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್, ಸತೀಶ್ ಕುಲಾಲ್, ಸದಸ್ಯ ಮಂಜುನಾಥ್ ಹೆಬ್ಬಾರ್, ಹೊರೆ ಕಾಣಿಕೆ ಸಮಿತಿಯ ಉಸ್ತುವಾರಿ ಭಾಸ್ಕರ್ ಶೇರಿಗಾರ್ ಗುಂಡಿಬೈಲ್ ಉಪಸ್ಥಿತರಿದ್ದರು.