ವಿದ್ಯುತ್ ಗ್ರಾಹಕರಿಗೆ ಶುಭಸುದ್ದಿ: ಇನ್ನೂ ಅಂಚೆ ಇಲಾಖೆಯಲ್ಲೂ ಬಿಲ್ ಪಾವತಿಸುವ ಅವಕಾಶ
ಮಂಗಳೂರು: ವಿದ್ಯುತ್ ಗ್ರಾಹಕರು ಇನ್ನು ಮುಂದೆ ಯಾವುದೇ ಅಂಚೆ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ. ಹೌದು, ರಾಜ್ಯದ 5 ವಿದ್ಯುತ್ ನಿಗಮಗಳಲ್ಲಿರುವ ಗ್ರಾಹಕರು ವಿದ್ಯುತ್ ಬಿಲ್‍ಗಳನ್ನು ಇನ್ನು ಮುಂದೆ ಅಂಚೆ ಇಲಾಖೆಯಲ್ಲಿ ಕಟ್ಟುವ ಅವಕಾಶ ಸಿಗಲಿದೆ.
ಈ ಹಿಂದೆ ಆಫ್‍ಲೈನ್ ಮೂಲಕ ಮಾತ್ರ ವಿದ್ಯುತ್ ಬಿಲ್ ಕಟ್ಟಲು ಅವಕಾಶ ಇತ್ತು. ಇನ್ನು ಮುಂದೆ ಆನ್‍ಲೈನ್‍ನಲ್ಲಿ ಕಟ್ಟಬಹುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಹಿಂದಿನ ನಿಯಮದಂತೆ ಒಂದು ಊರಿನ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್‍ಗಳನ್ನು ಅದೇ ತಾಲೂಕಿನ ಅಂಚೆ ವಿಭಾಗದ ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಇನ್ನು ಮುಂದೆ ಯಾವುದೇ ಅಂಚೆ ಕಚೇರಿಯಲ್ಲಿ ಬೇಕಾದರೂ ಬಿಲ್ ಪಾವತಿಸಬಹುದಾಗಿದೆ. ಇನ್ನು ಆನ್ ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲ ಶಾಖಾ ಅಂಚೆ ಕಚೇರಿಗಳಲ್ಲೂ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.