ಪ್ರತ್ಯೇಕ ಪ್ರಕರಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ,ಮದ್ಯ ಮಾರಾಟ- 7 ಮಂದಿ ವಿರುದ್ಧ ದೂರು ದಾಖಲು
ಕುಂದಾಪುರ/ಬೈಂದೂರು ಮಾ.15 (ಉಡುಪಿ ಟೈಮ್ಸ್ ವರದಿ): ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಹಾಗೂ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬ್ರಹ್ಮಾವರದ ಕಕ್ಕುಂಜೆ ಗ್ರಾಮದ ಮಹಾಬಲ ಕುಲಾಲ್ (41), ಕುಂದಾಪುರದ ಕಸಬಾ ಗ್ರಾಮ ರಂಜಿತ್ (30), ಆದಿತ್ಯ(23) , ಗೋಪಾಡಿ ಗ್ರಾಮದ ನಾರಾಯಣ (34), ಉದಯ (38), ಕಾವ್ರಾಡಿ ಗ್ರಾಮದ ನಾಗರಾಜ ಶೆಟ್ಟಿ (58) ಬೈಂದೂರಿನ ಕರಾವಳಿ ಶಿರೂರು ಗ್ರಾಮ ರಾಮ ಪೂಜಾರಿ (49) ಎಂಬವರ ವಿರುದ್ಧ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ದಾಳಿ ಮಾಡಿದ ಪೊಲೀಸರು ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ ಚೋರಾಡಿ ತಂಗೊಡ್ಲು ಎಂಬಲ್ಲಿ ಮಹಾಬಲ ಕುಲಾಲ್ ನನ್ನು, ಕುಂದಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಫೆರಿ ರಸ್ತೆಯ ಜಂಕ್ಷನ್ ಬಳಿ ಸಾರ್ವಜನಿಕ ಜಾಗದಲ್ಲಿ ರಂಜಿತ್, ಆದಿತ್ಯ, ಬೀಜಾಡಿ ಗ್ರಾಮದ ಸಮುದ್ರ ಕಿನಾರೆ ಬಳಿಯ ಸಾರ್ವಜನಿಕ ಜಾಗದಲ್ಲಿ ನಾರಾಯಣ, ಉದಯ 38ರನ್ನು ಹಾಗೂ ಕಾವ್ರಾಡಿ ಗ್ರಾಮದ ವಾಲ್ತೂರು -ಮುಂಬಾರು ಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬಾತನನ್ನು ಮತ್ತು ಬೈಂದೂರು ಪೊಲೀಸ್ ಠಾಣಾ ವ್ಯಪ್ತಿಯ ಯಡ್ತರೆ ಗ್ರಾಮದ ಬೈಂದೂರು ಹೊಸ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ರಾಮ ಪೂಜಾರಿ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವಶಕ್ಕೆ ಪಡೆದವರ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬಾತನಿಂದ 980 ರೂ ಮೌಲ್ಯದ ಮದ್ಯ ಹಾಗೂ 480 ನಗದು ವಶಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ, ಬೈಂದೂರು ಠಾಣೆಯಲ್ಲಿ ತಲಾ 1 ಹಾಗೂ ಕುಂದಾಪುರ ಠಾಣೆಯಲ್ಲಿ 3 ಸೇರಿ ಒಟ್ಟು 5 ಪ್ರತ್ಯೇಕ ಪ್ರಕರಣ ದಾಖಲಾಗಿದೆ.