ಕಾರ್ಕಳ: ವಿಷ ಪದಾರ್ಥ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಬೆಳ್ಮಣ್ ಗ್ರಾಮದ ಪುನಾರು ಮನೆ ಎಂಬಲ್ಲಿ ನಡೆದಿದೆ. ಮೈಕಲ್ ಹೆನ್ರಿ ಫೆನಾರ್ಂಡೀಸ್ (50) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಹಾಗೂ ಮಗಳು ವಿದೇಶದಲ್ಲಿ ಇರುವ ಕಾರಣ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.
ಇವರಿಗೆ ವಿಪರೀತ ಕುಡಿತದ ಅಭ್ಯಾಸವಿದ್ದು, ಫೆ.15 ರಂದು ರಾತ್ರಿ ಅಕ್ಕನ ಮನೆಯಲ್ಲಿ ಊಟ ಮಾಡಿ ತಮ್ಮ ಮನೆಗೆ ಹೋದವರು. ಜೀವನದಲ್ಲಿ ಮನನೊಂದು ಫೆ.16ರ ಮುಂಜಾನೆ ವೇಳೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.