ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಅಗಲಿದ ಆರ್. ಧ್ರುವನಾರಾಯಣರಿಗೆ ಶ್ರದ್ಧಾಂಜಲಿ
ಉಡುಪಿ ಮಾ.13 (ಉಡುಪಿ ಟೈಮ್ಸ್ ವರದಿ): ಇತ್ತೀಚೆಗೆ ಅಗಲಿದ ಕಾಂಗ್ರೆಸ್ ಮುಖಂಡ ಆರ್. ಧ್ರುವನಾರಾಯಣ್ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ರವರು ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರು. ಉಡುಪಿ ಜಿಲ್ಲಾ ಉಸ್ತುವಾರಿಗಳು ಆಗಿದ್ದ ಸರಳ ಸಜ್ಜನ ವ್ಯಕ್ತಿತ್ವದ ಆರ್. ಧ್ರುವನಾರಾಯಣ್ ರವರು ನಿಧನರಾಗಿರುವುದು ನಮ್ಮೆಲ್ಲರಿಗೂ ದಿಗ್ರಮೆ ಉಂಟು ಮಾಡಿದೆ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸಹ ಜಿಲ್ಲಾ ಉಸ್ತುವಾರಿ ನೆಲೆಯಲ್ಲಿ ಭಾಗವಹಿಸಿ ಪಕ್ಷಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಕ್ಷ ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಆರ್. ಧ್ರುವನಾರಾಯಣರವರನ್ನು ನೆನಪಿಸಿಕೊಂಡರು.
ಸಭೆಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ಆರ್. ಧ್ರುವನಾರಾಯಣ್ ರವರು ರಾಜಕೀಯಕ್ಕೆ ಬಂದವರು. ಅವರಲ್ಲಿ ಗಟ್ಟಿತನವಿತ್ತು ನೇರ ನುಡಿ ಅವರ ಸ್ವಭಾವವಾಗಿತ್ತು ಸಾಮಾನ್ಯ ಕಾರ್ಯಕರ್ತನೊಂದಿಗೂ ನಿಕಟ ಸಂಬಂಧವನ್ನು ಹೊಂದಿರುವ ಅಪರೂಪದ ರಾಜಕಾರಣಿಯಾಗಿ ಒಂದಿನಿತೂ ಅಹಂ ಇಲ್ಲದ ಸರಳ ಸಜ್ಜನ ಅಜಾತಶತ್ರು ವ್ಯಕ್ತಿತ್ವ ಆರ್ .ಧ್ರುವನಾರಾಯಣ್ ರವರದ್ದಾದೆ. ಅವರು ಎಂದೂ ಮರಳಿ ಬಾರದಿರುವ ಲೋಕಕ್ಕೆ ಪ್ರಯಾಣಿಸಿದ್ದಾರೆ ಎಂದರೆ ಅರಗಿಸಿಕೊಳ್ಳಲು ಅಸಾಧ್ಯ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಸಂತಾಪ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಪಕ್ಷದ ಮುಖಂಡರಾದ ದಿನೇಶ್ ಪುತ್ರನ್, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಬಿ. ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್, ಬಿ. ಕುಶಲ ಶೆಟ್ಟಿ , ಶಂಕರ್ ಕುಂದರ್, ಶ್ಯಾಮಲಾ ಭೀಂಡಾರಿ, ಪ್ರಖ್ಯಾತ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಮೇಶ್ ಕಾಂಚನ್, ದಿನಕರ್ ಹೇರೂರು, ಶಿವಾಜಿ ಸುವರ್ಣ, ರೋಶನಿ ಒಲಿವರಾ, ಪ್ರಶಾಂತ್ ಜತ್ತನ್ನ, ಕೀರ್ತೀ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ರೋಶನ್ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಜಯ ಕುಮಾರ್, ಕಿಶೋರ್ ಕುಮಾರ್ ಎರ್ಮಾಳ್, ಸಂಜಯ ಆಚಾರ್ಯ ಉಪಸ್ಥಿತರಿದ್ದರು.