ಪುತ್ತೂರು: ಸ್ನಾನಕ್ಕೆಂದು ನದಿಗೆ ಇಳಿದ ವಿದ್ಯಾರ್ಥಿ ನೀರುಪಾಲು

ಪುತ್ತೂರು, ಮಾ.13 : ನದಿಗೆ ಸ್ನಾನಕ್ಕೆಂದು ಇಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಯೂರಿನಲ್ಲಿ ನಡೆದಿದೆ.

ಮೊಹಮ್ಮದ್ ಸಲ್ಮಾನ್ (16) ಮೃತಪಟ್ಟ ವಿದ್ಯಾರ್ಥಿ. ಮಣಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಮೊಹಮ್ಮದ್ ಸಲ್ಮಾನ್ ತನ್ನ ಸಂಬಂಧಿ ಮೊಹಮ್ಮದ್ ಇಫ್ರಾರ್ ಎಂಬಾತನ ಜತೆ ಚಿಕ್ಕಮ್ಮನ ಮನೆಗೆ ಬಂದು ಬಳಿಕ ಬಿಳಿಯೂರು ಅಣೆಕಟ್ಟೆ ಬಳಿ ನದಿಗೆ ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಆಳವಾದ ಪ್ರದೇಶದಲ್ಲಿ ಸಲ್ಮಾನ್ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ವೇಳೆ ಇಫ್ರಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!