ಜೆಸಿಐ ಬ್ರಹ್ಮಾವರ ಸೇವಾಮೆ ಸಂಸ್ಥೆಯಿಂದ ಮಹಿಳಾ ದಿನಾಚರಣೆ
ಬ್ರಹ್ಮಾವರ ಮಾ.13(ಉಡುಪಿ ಟೈಮ್ಸ್ ವರದಿ): ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಆವರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಮತ್ತು ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾಧು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಭಾಗದ ಕೃಷಿಯಲ್ಲಿ ಸಾಧನೆ ಮಾಡಿದ ಅನಿತಾ ಸೂರ ಕುಲಾಲ ಹಿಲಿಯಾಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಸಾಧನೆಮಾಡಿದ ನಾಟೀ ವೈದ್ಯೆ ಪುಟ್ಟಿಬಾಯಿ ಕಲ್ಮರ್ಗಿ ಇವರನ್ನು ಸಾಂಪ್ರದಾಯಿಕವಾಗಿ ಸನ್ಮಾನದ ಜೊತೆ ಸೀರೆ ನೀಡಿ ಗೌರವಿಸಲಾಯಿತು.
ಈ ವೇಳೆ ಜೇಸಿ ಸಂಸ್ಥೆಯ ಬಗ್ಗೆ ಜೇಸಿ ಮತ್ತು ಜೇಸಿಯೇತರ ಮಹಿಳೆಯರಿಗೆ ಜೆಸಿಐ ಪಿಪಿಪಿ ಕಾರ್ತೀಕೇಯ ಮಧ್ಯಸ್ಥ ಜೆಸಿಐ ವಲಯ 15 ರ ಪೂವಾಧ್ಯಕ್ಷರು ತರಬೇತಿ ನೀಡಿದರು. ನಂತರ ಜೆಸಿ ಜ್ಯೋತಿ ಪ್ರಶಾಂತ್ ಪ್ರಾವಿಷನಲ್ ತರಬೇತುದಾರರು ಇವರು ಗ್ರಾಮೀಣ ಮಹಿಳೆಯರಿಗೆ ಲಿಂಗ ತಾರತಮ್ಯ ಮತ್ತು ಆಂತರಿಕ ಸಂಬಂಧದ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಾಗೂ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಶಾಸ್ತ್ರದಂತೆ ಹರಿಶಿನ ಕುಂಕುಮ ರವಿಕೆ ವಸ್ತ್ರ ಮತ್ತು ಹೂವನ್ನು ನೀಡಿ ಗೌರವಯುತವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಜ್ಯೋತಿ ಪ್ರಶಾಂತ್, ಜೆಸಿಐ ಬ್ರಹ್ಮಾವರ ಸೇವಾಮೆ ಅಧ್ಯಕ್ಷರಾಗಿರುವ ಜೇಸಿ ಕೃಷ್ಣಮೂರ್ತಿ ಹೈಕಾಡಿ, ಸರಕಾರಿ ಪ್ರೌಢ ಶಾಲಾ ಆಂಗ್ಲ ಭಾಷಾ ಶೀಕ್ಷಕಿ ಜೆಸಿ ಸುಪ್ರೀತಾ ಶೆಟ್ಟಿ, ಸ.ಹಿ.ಪ್ರಾ ಶಾಲೆ ಹಾಯ್ಕಾಡಿ ಯ ಹಿರಿಯ ಶಿಕ್ಷಕಿ ಜ್ಯೋತಿ ಆರ್ ಪೂಜಾರಿ, ಹೈಕಾಡಿ ಹಾಲು ಉತ್ಪಾದಕರ ಮಹಿಳಾ ಸಂಘ ನಿಯಮಿತ ಸಂಸ್ಥೆಯ ನಿರ್ದೇಶಕಿ ಸುಲೋಚನ ಶೆಟ್ಟಿ, ಹಾಯ್ಕಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾನುಮತಿ, ಬಾವಣಿ ಅಂಗನವಾಡಿ ಕ್ಷೇತ್ರದ ಲಲಿತಾ , ಸಂಸ್ಥೆಯ ಸ್ಥಾಪಕಾಧ್ಯಕ್ಷರು ಜೊಯೆಲ್ ಡಿ ಅಲ್ಮೇಡಾ ,ಜ್ಯೂನಿಯರ್ ಜೇಸಿ ಸದಸ್ಯರಾದ ಜೆಜೆಸಿ ಕಾವ್ಯಶ್ರೀ ಹೆಬ್ಬಾರ್, ಜೆಜೆಸಿ ದೀಕ್ಷಾ ಪಿ ಶೆಟ್ಟಿ, ಜೆಜೆಸಿ ಅಮಿತಾ, ಜೆಜೆಸಿ ನಿಶ್ಮಿತಾ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.