ಬ್ರಹ್ಮಾವರ: ಅನೈತಿಕ ಸಂಬಂಧ ವಿಚಾರ ಪ್ರಶ್ನಿಸಿದ ವ್ಯಕ್ತಿಯ ಕೊಲೆ
ಬ್ರಹ್ಮಾವರ (ಉಡುಪಿ ಟೈಮ್ಸ್ ವರದಿ): ಇಲ್ಲಿನ ಕರ್ಜೆ ಗುಡ್ಡೆಯಂಗಡಿ ಎಂಬಲ್ಲಿ ನೆರೆಮನೆಯ ಮಹಿಳೆಯ ಅನೈತಿಕ ಸಂಬಂಧ ವಿಚಾರವಾಗಿ ಪ್ರಶ್ನಿಸಿದ ವ್ಯಕ್ತಿಯೋರ್ವನನ್ನು ಮಾರಕಾಯುಧದಿಂದ ಹೊಡೆದು ಕೊಲೆಗೈದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕರ್ಜೆ ನವೀನ್ ನಾಯ್ಕ್ (42) ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ನವೀನ್ ನೆರೆಮನೆಯ ಸರಸ್ವತಿ ಎಂಬವರ ಮನೆಗೆ ಮಲ್ಪೆಯ ಗೌತಮ್ ಪ್ರತಿನಿತ್ಯ ಬರುತ್ತಿದ್ದನ್ನು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಗೌತಮ್ ನಿನ್ನೆ ರಾತ್ರಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ನವೀನ ಮನೆಗೆ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ನವೀನ್ ಮನೆಯವರು ನೆರೆಮನೆ ಸಮಾರಂಭಕ್ಕೆ ಹೋದ ಸಂದರ್ಭ ಮೂರ್ನಾಲ್ಕು ಮಂದಿ ಬಂದು ಮಾತನಾಡಲಿದೆ ಎಂದು ಮನೆಯಿಂದ ಹೊರಗೆ ಕರೆದಿದ್ದಾರೆ. ನಂತರ ನವೀನ್ ಮತ್ತು ಅವರ ಜತೆ ವಾಗ್ವಾದ ನಡೆದಿತ್ತು.ಬಳಿಕ ಮಾರಕಾಯುಧದಿಂದ ನವೀನ್ ತಲೆಗೆ ಹೊಡೆದಿದ್ದಾರೆ. ಹೊಡೆತಕ್ಕೆ ಒಳಗಾದ ನವೀನ್ ಅಲ್ಲೇ ಕುಸಿದು ಬಿದ್ದ ಮೃತಪಟ್ಟಿದ್ದ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.