ಗೀಸರ್ ನ ಅನಿಲ್ ಸೋರಿಕೆ: ಹೋಳಿ ಸಂಭ್ರಮದಲ್ಲಿದ್ದ ದಂಪತಿ ಮೃತ್ಯು
ಲಕ್ನೋ ಮಾ.9 : ಗೀಸರ್ ಗೆ ಆಳವಡಿಸಿದ್ದ ಅನಿಲ ಸೋರಿಕೆಯಾಗಿ ಬಾತ್ ರೂಮ್ ನಲ್ಲಿ ದಂಪತಿಗಳು ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ದೀಪಕ್ ಗೋಯಲ್ (40) ಮತ್ತು ಅವರ ಪತ್ನಿ ಶಿಲ್ಪಿ (36) ಮೃತ ದಂಪತಿಗಳು.
ದೀಪಕ್ ಹಾಗೂ ಪತ್ನಿ ಶಿಲ್ಪಿ ನಿನ್ನೆ ಹೋಳಿ ಬಣ್ಣದಲ್ಲಿ ಕುಣಿದು, ಕುಪ್ಪಳಿಸಿ ಸಂಜೆ 3:30ರ ವೇಳೆ ಬಣ್ಣವನ್ನು ತೊಳೆಯಲು ಇಬ್ಬರು ಜೊತೆಯಾಗಿ ಬಾತ್ ರೂಮ್ ಗೆ ತೆರಳಿದ್ದಾರೆ. ಹೋಳಿ ಬಣ್ಣವನ್ನು ನೀರಿನಲ್ಲಿ ತೊಳೆಯುವಾಗ ಬಚ್ಚಲು ಮನೆಯಲ್ಲಿದ್ದ ಗೀಸರ್ ಗೆ ಆಳವಡಿಸಿದ್ದ ಅನಿಲ ಸೋರಿಕೆ ಆಗಿದೆ. ತುಂಬಾ ಸಮಯದಿಂದ ವಾಶ್ ರೂಮ್ ನಲ್ಲೇ ಇದ್ದ ದಂಪತಿಗಳನ್ನು ಮಕ್ಕಳು ಹೊರಗೆ ಕರೆದಿದ್ದಾರೆ. ಈ ವೇಳೆ ಮಕ್ಕಳ ಕರೆಗೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಮನೆಯ ಇತರ ಸದಸ್ಯರುಗಳು ಬಂದು ಕರೆದು ಬಾಗಿಲು ಬಡಿದಿದ್ದಾರೆ. ಆದರೆ ಅದಕ್ಕೂ ಪ್ರತಿಕ್ರಿಯೆ ನೀಡದ ಕಾರಣ ಬಾಗಿಲು ಒಡೆದು ನೋಡುವಾಗ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ದಂಪತಿಗಳು ಉಸಿರುಗಟ್ಟಿ ಆದಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.