ಜನಾರ್ದನ ರೆಡ್ಡಿ ಹಣದ ಜಾಡಿನ ವಿವರ ನೀಡುವಂತೆ 4 ದೇಶಗಳಿಗೆ ಮನವಿ ಪತ್ರ ನೀಡಲು ಆದೇಶ-ಸಿಬಿಐ ಕೋರ್ಟ್

ನವದೆಹಲಿ ಮಾ.9 : ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಉದ್ಯಮಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಣದ ಜಾಡು ಹಿಡಿದಿರುವ ವಿವರಗಳನ್ನು ನೀಡುವಂತೆ 4 ದೇಶಗಳಿಗೆ ಸಿಬಿಐ ಕೋರ್ಟ್ ಮನವಿ ಮಾಡಿದೆ.

ವಿಧಾನಸಭಾ ಚುನಾವಣೆಗೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸಂಘಟಿಸಿ ಭರ್ಜರಿ ಪ್ರಚಾರ ನಡೆಸುತ್ತಿರುವ ವೇಳೆಯಲ್ಲೇ ನ್ಯಾಯಾಲಯದ ಈ ಆದೇಶ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ವಿವರಗಳನ್ನು ನೀಡುವಂತೆ ಸ್ವಿಟ್ಜರ್ಲೆಂಡ್, ಸಿಂಗಾಪುರ, ಐ.ಲ್ ಆಫ್ ಮ್ಯಾನ್ ಮತ್ತು ಯುಎಇ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡುವಂತೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ. ಸ್ವಿಟ್ಜಲೆರ್ಂಡ್‍ನಲ್ಲಿರುವ ಸಕ್ಷಮ ಪ್ರಾಧಿಕಾರದ ಪರವಾಗಿ ವಿನಂತಿಯ ಪತ್ರವನ್ನು ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ. ಆದೇಶದ ಪ್ರತಿ ಮತ್ತು ದಾಖಲೆಗಳ ವಿವರಗಳನ್ನು ಪ್ರಾಧಿಕಾರಕ್ಕೆ ಕಳುಹಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಯುಎಇ, ಸಿಂಗಾಪುರ ಮತ್ತು ಐಲ್ ಆಫ್ ಮ್ಯಾನ್‍ನಲ್ಲಿರುವ ಅಧಿಕಾರಿಗಳಿಂದ ಜಿಎಲ್‍ಎ ಟ್ರೇಡಿಂಗ್ ಇಂಟರ್‍ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‍ನ ವಿವರಗಳನ್ನು ಕೋರಿ ಸಿಬಿಐ ಕೋರಿಕೆಗೆ ಸಂಬಂಧಿಸಿದಂತೆ ಇದೇ ರೀತಿಯ ಆದೇಶಗಳನ್ನು ನೀಡಲಾಗಿದೆ.

“ಸ್ವಿಟ್ಜಲೆರ್ಂಡ್‍ನಲ್ಲಿರುವ ಸಕ್ಷಮ ಪ್ರಾಧಿಕಾರಕ್ಕೆ ನ್ಯಾಯಾಂಗ ಸಹಾಯಕ್ಕಾಗಿ ಸೆ.166-ಎ ಸಿಆರ್ ಪಿಸಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಈ ಮೂಲಕ ಅನುಮತಿಸಲಾಗಿದೆ” ಎಂದು ಮಾರ್ಚ್ 4 ರಂದು ನೀಡಿದ ಆದೇಶದಲ್ಲಿ, ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಚಂದ್ರಕಲಾ ಅವರು ತಿಳಿಸಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ, ಜಿ ಲಕ್ಷ್ಮೀ ಅರುಣಾ (ಪ್ರಕರಣದಿಂದ ಬಿಡುಗಡೆಗೊಂಡ ನಂತರ), ಐಎಎಸ್ ಅಧಿಕಾರಿ ಎಂಇ ಶಿವಲಿಂಗ ಮೂರ್ತಿ, ಐಎಫ್‍ಎಸ್ ಅಧಿಕಾರಿ ಎಸ್ ಮುತ್ತಯ್ಯ, ಕೆ ಮೆಹಫುಜ್ ಅಲಿ ಖಾನ್, ಎಸ್‍ಪಿ ರಾಜು, ಮಹೇಶ್ ಎ ಪಾಟೀಲ್ ಮತ್ತು ಮಾಜಿ ರೇಂಜರ್ ಫಾರೆಸ್ಟ್ ಆಫೀಸರ್ ಎಚ್ ರಾಮಮೂರ್ತಿ ವಿರುದ್ಧ ಸಿಬಿಐ ಅರ್ಜಿ ಸಲ್ಲಿಸಿದೆ.

ಸ್ವಿಟ್ಜರ್ಲೆಂಡ್‍ನಲ್ಲಿ ಜಿಎಲ್‍ಎ ಟ್ರೇಡಿಂಗ್ ಇಂಟರ್ ನ್ಯಾಷನಲ್ ನ ಸಂಯೋಜನೆಯ ವಿವರಗಳು, ಸ್ವಿಸ್ ಬ್ಯಾಂಕ್‍ಗಳಲ್ಲಿನ ಕಂಪನಿಯ ಖಾತೆಯ ವಿವರಗಳು, ಮಾಲಕರ ವಿವರಗಳು, ಅಧಿಕೃತ ಸಹಿದಾರರು, ಬ್ಯಾಂಕ್ ಖಾತೆಗಳು ಮತ್ತು ಕಂಪನಿಯೊಂದಿಗೆ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಸಂಪರ್ಕದ ವಿವರಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ ಹುಡುಕುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!