ಪಾಕಿಸ್ಥಾನದಲ್ಲಿ ಚಾಲಕನಿಂದ ಹಿಂದೂ ವೈದ್ಯನ ಕತ್ತು ಸೀಳಿ ಹತ್ಯೆ
ಇಸ್ಲಾಮಾಬಾದ್ ಮಾ.9 : ಪಾಕಿಸ್ಥಾನದ ಹೈದರಾಬಾದ್ ನಲ್ಲಿ ಹಿಂದೂ ವೈದ್ಯನೋರ್ವನನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಚರ್ಮರೋಗ ವೈದ್ಯರಾಗಿದ್ದ ಡಾ.ಧರಮ್ ದೇವ್ ರಾಠಿ ಮೃತಪಟ್ಟವರು. ಅವರ ಮನೆಯೊಳಗೆ ಅವರ ಚಾಲಕ ಹನೀಫ್ ಲೆಘರಿ ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಂದಿದ್ದಾನೆ. ಸದ್ಯ ಆರೋಪಿ ಚಾಲಕನನ್ನು ಖೈರ್ ಪುರದ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮನೆಗೆ ಹೋಗುವಾಗ ಇಬ್ಬರ ನಡುವೆ ಜಗಳವಾಗಿದೆ. ಮನೆಗೆ ತಲುಪಿದ ಚಾಲಕ ಅಡುಗೆ ಮನೆಯೊಳಗಿಂದ ಚಾಕು ತೆಗೆದುಕೊಂಡು ಮನೆಯಲ್ಲೇ ವೈದ್ಯನನ್ನು ಕೊಂದಿದ್ದಾನೆ. ನಂತರ ಚಾಲಕ ಸ್ಥಳದಿಂದ ವೈದ್ಯರ ಕಾರಿನಲ್ಲೇ ಪರಾರಿಯಾಗಿದ್ದಾನೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ