ಕಾಪು: ಮೀನುಗಾರಿಕೆ ತೆರಳಿದ್ದ ಮೀನುಗಾರ ಬಲೆಗೆ ಸಿಲುಕಿ ಸಾವು
ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೋರ್ವ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಇಂದು(ಫೆ.8) ಬೆಳಿಗ್ಗೆ ಕಾಪು ಲೂಟ್ಹೌಸ್ ಬಳಿ ನಡೆದಿದೆ. ಕಾಪು ಗರಡಿ ಬಳಿ ನಿವಾಸಿ ಕಾಸ್ಮರ್ (65) ಮೃತ ಮೀನುಗಾರ.
ಇವರು ಇಂದು ಬೆಳಗ್ಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಸಮಯದಲ್ಲಿ ಬಲೆಯೊಳಗೆ ಸಿಲುಕಿ, ಸಮುದ್ರಕ್ಕೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
ಕಾಸ್ಮರ್ ನೀರಿನಲ್ಲಿ ಮುಳುಗುತ್ತಿರುವುದನ್ನು ಸ್ಥಳೀಯ ಮೀನುಗಾರರು ಗಮನಿಸಿದ್ದು, ತಕ್ಷಣ ಅವರ ನೆರವಿಗೆ ಧಾವಿಸಿದರು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿಸಲಾಗಿದೆ. ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.