ಬೈಕ್ ಹಾಗೂ ಬೊಲೆರೊ ನಡುವೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ವಿಟ್ಲ: ಬೈಕ್ ಹಾಗೂ ಬೊಲೆರೊ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರೋರ್ವರು ಮೃತಪಟ್ಟ ಘಟನೆ ಫೆ.8 ರಂದು ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ. ಮಾಣಿ ಬರಿಮಾರು ನಿವಾಸಿ ಬಾಲಕೃಷ್ಣ(55) ಮೃತ ಬೈಕ್ ಸವಾರ.
ಎರಡೂ ವಾಹನಗಳು ವಿಟ್ಲ ಭಾಗದಿಂದ ಉಕ್ಕುಡ ಭಾಗಕ್ಕೆ ತೆರಳುತ್ತಿದ್ದಾಗ ಕಾಶಿಮಠ ಸಮೀಪ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಬಾಲಕೃಷ್ಣ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿರವರ ನೇತೃತ್ವದ ಪೊಲೀಸರ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ. ಮೃತದೇಹವನ್ನು ವಿಟ್ಲ ಸರಕಾರ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಬೊಲೆರೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.