ಗಾಂಧಿವಾದವನ್ನು ಬಿಟ್ಟರೆ ದೇಶಕ್ಕೆ ಭವಿಷ್ಯವಿಲ್ಲ: ಉದ್ಯಾವರ ನಾಗೇಶ್ ಕುಮಾರ್
ಉದ್ಯಾವರ(ಉಡುಪಿ ಟೈಮ್ಸ್ ವರದಿ): ದೇಶದಲ್ಲಿ ತಾಂಡವ ವಾಡುತ್ತಿರುವ ಪರ ಧರ್ಮ ಅಸಹನೆ, ಕೋಮುವಾದಕ್ಕೆ ಪರಿಹಾರ ಗಾಂಧಿವಾದವೇ ವಿನಃ ಬೇರೆ ಯಾವುದೂ ಅಲ್ಲಎಂದು ಗಾಂಧಿ ತೋರಿದ ದಾರಿಯಲ್ಲಿ ನಮಗೆ ನಡೆಯಲು ಸಾಧ್ಯವಾದರೆ ಮಾತ್ರ ಗಾಂಧಿ ಕಂಡ ಕನಸಿನ ಭಾರತ ನಿರ್ಮಾಣವಾಗಿ ದೇಶ ಸಮಗ್ರತೆಯಿಂದ ಇದ್ದು ಅಭಿವೃದ್ಧಿಯನ್ನು ಹೊಂದಬಹುದು. ಗಾಂಧಿವಾದವನ್ನು ಬಿಟ್ಟರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಉದ್ಯಾವರ ನಾಗೇಶ್ ಕುಮಾರ್ ತಿಳಿಸಿದರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾರ್ಯಾಲಯದಲ್ಲಿ ಜರಗಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ಅವರು ಗಾಂಧಿ ಚಿಂತನೆಗಳನ್ನು ಮುಂದಿನ ಜನಾಂಗಕ್ಕೆ ದಾಟದಂತೆ ಮಾಡುವ ಹುನ್ನಾರ ಇವತ್ತು ಸಾಗುತ್ತಿದೆ. ಬಿಜೆಪಿಯಂತ ಮೂಲಭೂತವಾದಿ ಪಕ್ಷಕ್ಕೆ ಗಾಂಧಿ ಚಿಂತನೆಗಳೇ ಮಾರಕ. ಹಾಗಾಗಿ ಸ್ವಚ್ಚ ಭಾರತ್ ಅಭಿಯಾನಕ್ಕೆ ವಿಶೇಷ ಪ್ರಚಾರ ಕೊಟ್ಟು ಗಾಂಧಿಯನ್ನು ಸ್ವಚ್ಚತೆಗೆ ಮೀಸಲಾಗಿಸುವ ಹುನ್ನಾರ ಜರಗುತ್ತಿದೆ ಎಂದರು . ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ, ಸರಳ ಪ್ರಧಾನಿಗಳಲ್ಲಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಮುಖರು. ನೆಹರೂ ನಂತರ ಯಾರು ಭಾರತದ ಪ್ರಧಾನಿ ಎಂಬ ಪ್ರಶ್ನೆ ಉದ್ಭವಿಸಿದಾಗ ಶಾಸ್ತ್ರಿಯವರು ಪ್ರಧಾನಿಗಳಾಗಿ ಭಾರತವನ್ನು ವಿಶ್ವದೆತ್ತರಕ್ಕೆ ಎತ್ತಿಹಿಡಿದರು ಎಂದು ತಿಳಿಸಿದರು.
ಗಾಂಧೀಜಿ ಮತ್ತು ಶಾಸ್ತ್ರಿಯವರ ಬದುಕಿನ ಬಗ್ಗೆ ವಿವರವನ್ನು ನೀಡಿದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಭಾಸ್ಕರ್ ಕೋಟ್ಯಾನ್‌ರವರು ಇಂತಹ ದೇಶಾಭಿವೃದ್ಧಿಯ ಪರಂಪರೆಯನ್ನು ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ ಇಂದು ಬಿಜೆಪಿ ಹಾಳುಗೆಡವುತ್ತಿದೆ. ಇದನ್ನು ನಾವು ತಡೆಯುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಮರ್ವಿನ್ ಫೆರ್ನಾಂಡಿಸ್, ಉಪಾಧ್ಯಕ್ಷರಾದ ಸುಗಂಧಿ ಶೇಖರ್, ಚಂದ್ರಾವತಿ ಎಸ್ ಭಂಡಾರಿ, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್, ಸಂಘಟನಾ ಕಾರ್ಯದರ್ಶಿಗಳಾದ ಮಹಮ್ಮದ್ ಅನ್ಸರ್, ಪುಂಡರೀಶ್ ಕುಂದರ್, ಲಕ್ಷಣ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯರಾದ ಮೇರಿ ಡಿಸೋಜಾ, ರಾಜೀವಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೆಲನ್ ಫೆರ್ನಾಂಡಿಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿತೇಶ್ ಕುಮಾರ್, ಎಸ್.ಸಿ. ಘಟಕದ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ, ಕಿಸಾನ್ ಘಟಕದ ಅಧ್ಯಕ್ಷರಾದ ಶೇಖರ್ ಕೆ. ಕೋಟ್ಯಾನ್ ಉದ್ಯಾವರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಹಮ್ಮದ್ ಇರ್ಫಾನ್ ಮತ್ತು ಸ್ಟೀವನ್ ಕುಲಾಸೊ ಹಾಗೂ ಪಕ್ಷದ ನಾಯಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಹಿರಿಯ ಕಾರ್ಯಕರ್ತ ಸಂಜೀವ ಸುವರ್ಣರವರು ನಾಯಕರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು . ಕಾರ್ಯದರ್ಶಿ ರಿಯಾಝ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.