ಹಿರಿಯಡಕ: ಪ್ರಸಾದ್ ನೇತ್ರಾಲಯ ಹಾಗು ವಿವಿಧ ಸಂಘಟನೆ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಹಿರಿಯಡಕ(ಉಡುಪಿ ಟೈಮ್ಸ್ ವರದಿ) : ಕಾಜಾರಗುತ್ತು ಗೆಳೆಯರ ಬಳಗ ಮತ್ತು ಕಾಜಾರಗುತ್ತು ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇದರ ಸಹಯೋಗದೊಂದಿಗೆ ಕಾಜಾರಗುತ್ತು ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ನೇತ್ರ ಮತ್ತು ಬಿ.ಪಿ ಶುಗರ್ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯೆ ಡಾ. ಮೈತ್ರಿ ಅವರು ಮಾತನಾಡಿ, ದೇಹದಲ್ಲಿರುವ ಎಲ್ಲಾ ಅಂಗಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಹಾಗೆಯೇ ಕಣ್ಣು ಕೂಡ, ಕಣ್ಣಿನ ಪೊರೆ ಎಂಬುವುದು ಖಾಯಿಲೆ ಅಲ್ಲ. ಅದು ವಯೋಸಹಜ ಸ್ಥಿತಿ. ಈ ಬಗ್ಗೆ ಭಯಬೇಡ ಎಂದು ಹೇಳಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರ ಪೆರ್ಣಂಕಿಲದ ಆರೋಗ್ಯಾಧಿಕಾರಿ ಡಾ.ರವೀಂದ್ರ ಬೋರ್ಕರ್, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಹೆಬ್ರಿ ಸಮುದಾಯ ಕೇಂದ್ರ ಅಸಂಕ್ರಾಮಿಕ ರೋಗಗಳ ಘಟಕದ ವೈದ್ಯಾಧಿಕಾರಿ ಡಾ. ಅರ್ಚನಾ , ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಹರಿಣಿ, ಕೋಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ವಿಜಯಲಕ್ಷ್ಮಿ ಆರ್. ನಾಯಕ್ , ಶಾಲಾ ಮುಖ್ಯೋಪಾಧ್ಯಾಯ ಸಾಧು ಮೊದಲಾದವರು ಉಪಸ್ಥಿತರಿದ್ದರು.