ರಾಜ್ಯದಲ್ಲಿ ಅಂಗನವಾಡಿ ಪುನರಾರಂಭ: ಸರ್ಕಾರ ಚಿಂತನೆ
ಬೆಂಗಳೂರು : ರಾಜ್ಯದಲ್ಲಿ ಶಾಲಾ ಕಾಲೇಜುಗಳ ಆರಂಭದ ಬಳಿಕ ಇದೀಗ ಅಂಗನವಾಡಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಂಗನವಾಡಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಿ 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದೆ
ಇತ್ತೀಚೆಗೆ ರಾಜ್ಯದಲ್ಲಿ ಅಂಗನವಾಡಿಗಳನ್ನು ಜನವರಿ 31 ರೊಳಗೆ ಪ್ರಾರಂಭಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಶೀಘ್ರವಾಗಿ ಅಂಗನವಾಡಿಗಳನ್ನು ಆರಂಭಿಸಲು ರಾಜ್ಯ ಸದಕಾರ ಮಾರ್ಗಸೂಚಿ ಪ್ರಕರಟಿಸಿದೆ.
ಅದರಂತೆ, ಗ್ರಾಮಪಂಚಾಯಿತಿ ಮೂಲಕ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು, ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಕೊಳ್ಳೊದು ಕಡ್ಡಾಯ, ಶೌಚಾಲಯ ಶುಚಿಗೊಳಿಸುವುದು, 3 ವರ್ಷದೊಳಗಿ ಮಕ್ಕಳು, ಗರ್ಭಿಣಿಯರು ಅಂಗನವಾಡಿಗೆ ಭೇಟಿ ನೀಡದಂತೆ ನೋಡಿಕೊಳ್ಳುವುದು, ಕನಿಷ್ಟ 5 ಮಕ್ಕಳು ಇರುವುದಂತೆ ನೋಡಿಕೊಳ್ಳುವುದು, ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ, ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಮಕ್ಕಳು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು, ಮಕ್ಕಳಿಗೆ ಕೆಮ್ಮು ಜ್ವರ, ಗಂಟಲು ನೋವಿನ ಲಕ್ಷಣ ಇದ್ದರೆ ಹತ್ತಿರದ ಸರ್ಕಾರಿ ವೈದ್ಯರಿಗೆ ತೋರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.