ಜಾರ್ಖಂಡ್‍ನ ವಿವಿಧ ಕಡೆ ಇಡಿ ದಾಳಿ-3 ಕೋಟಿ ವಶ

ರಾಂಚಿ ಮಾ.3: ಜಾರ್ಖಂಡ್‍ ರಾಜ್ಯದ ಖನಿಜ ಅಭಿವೃದ್ಧಿ ನಿಗಮದ ಮಾಜಿ ಉದ್ಯೋಗಿ ಅಶೋಕ್ ಕುಮಾರ್ ಮತ್ತು ಎಹ್ಸಾನ್ ಅನ್ಸಾರಿ ಮನೆ ಮತ್ತು ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಅಶೋಕ್ ಕುಮಾರ್ ಮತ್ತು ಎಹ್ಸಾನ್ ಅನ್ಸಾರಿಗೆ ಸೇರಿದ ರಾಂಚಿ ಮತ್ತು ಹಜಾರಿಬಾಗ್‍ನಲ್ಲಿರುವ 14 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅನ್ಸಾರಿ ಬಳಿ 3 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಾಗೂ ಈ ಹಣ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್‍ಗೆ ಸಂಬಂಧಿಸಿದ್ದಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!