ಶ್ರೀಅಘೋರೇಶ್ವರ ದೇವಸ್ಥಾನ ಫೆ14ರಿಂದ16 ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ
ಉಡುಪಿ:(ಉಡುಪಿ ಟೈಮ್ಸ್ ವರದಿ) ಶ್ರೀಅಘೋರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ 14 ರಿಂದ ಫೆ 16ರವರೆಗೆ ನಡೆಯಲಿದ್ದು ಆ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮವು ಫೆ 5 ರಂದು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ನಕ್ಷತ್ರಿಯವರು ಪೂಜಾ ಕಾರ್ಯ ನೆರವೇರಿಸಿದರು
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಆಡಳಿತ ಮುಕ್ತೇಸರ ಚಂದ್ರ ಶೇಖರ ಕಾರಂತ, ಕಾರ್ಯದರ್ಶಿ ಶ್ಯಾಮ ಸುಂದರ್ ನಾಯರಿ, ಖಜಾಂಚಿ ಪ್ರಭಾಕರ್ ಮಧ್ಯಸ್ಥ, ಸದಸ್ಯರಾದ ನಿತ್ಯಾನಂದ ನಾಯರಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ್ ನಾಯರಿ, ಖಜಾಂಚಿ ಪ್ರಕಾಶ್ ಮಧ್ಯಸ್ಥ ಹಿರಿಯರಾದ ರಾಮಚಂದ್ರ ನಾಯರಿ, ಮಂಜುನಾಥ್ ನಾಯರಿ ಉಪಸ್ಥಿತರಿದ್ದರು.