ವಿವಾಹಕ್ಕೆ ಆಮಂತ್ರಿಸಲಿಲ್ಲ ಎಂದು ಮದುವೆ ಮನೆಗೆ ಕಲ್ಲೆಸೆದ ವ್ಯಕ್ತಿಯ ಕೊಲೆ

ಕೊಟ್ಟಾಯಂ ಮಾ.3 : ವಿವಾಹ ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲ ಎಂಬ ಕಾರಣಕ್ಕೆ ಮದುವೆ ಮನೆಗೆ ಕಲ್ಲೆಸೆದ ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಚಾಲ್ ಗ್ರಾಮದಲ್ಲಿ ನಡೆದಿದೆ.

ಉಂಬಿಡಿಯ ಬಿನು(36) ಹತ್ಯೆಯಾದ ವ್ಯಕ್ತಿ. ಈ ವಾರದ ಆರಂಭದಲ್ಲಿ ಕರುಕಚಾಲ್ ಗ್ರಾಮದ ನಿವಾಸಿ ಸೆಬಾಸ್ಟಿಯನ್ ವಿವಾಹವಾಗಿದ್ದರು. ಆದರೆ, ಉಂಬಿಡಿಯ ಬಿನು ಎಂಬಾತನನ್ನು ವಿವಾಹಕ್ಕೆ ಆಮಂತ್ರಿಸಿರಲಿಲ್ಲ. ಇದರಿಂದ ಅವಮಾನಿತನಾದ ಬಿನು ತನ್ನ ನೆರೆಮನೆಯವರು ವಿವಾಹ ಸಮಾರಂಭಕ್ಕೆ ತನ್ನನ್ನು ಆಮಂತ್ರಿಸಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡು ಅವರ ಮನೆಯ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಸಿದ್ದಾನೆ. ಅದಕ್ಕೆ ಪ್ರತೀಕಾರವಾಗಿ ನೆರೆಮನೆಯ ವರ ಸೆಬಾಸ್ಟಿಯನ್, ಬಿನುವಿನೊಂದಿಗೆ ವೈಷಮ್ಯವಿದ್ದ ವಿಷ್ಣು ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಬಳಿಕ ರವಿವಾರ ರಾತ್ರಿ ವಿಷ್ಣು ಹಾಗೂ ಸೆಬಾಸ್ಟಿಯನ್ ಬಿನುವಿನೊಂದಿಗೆ ಜಗಳಕ್ಕಿಳಿದು, ಆತನ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇರಿತದ ಗಾಯಗಳಿಗೆ ಆತ ಬಲಿಯಾಗಿದ್ದಾನೆ. ಇದಾದ ನಂತರ ಆರೋಪಿಗಳು ತಾವು ಹತ್ಯೆಗೆ ಬಳಸಿದ ಆಯುಧಗಳೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!