ಮುಕೇಶ್ ಅಂಬಾನಿಗೆ ದೇಶದಲ್ಲೂ, ವಿದೇಶದಲ್ಲೂ z+ ಭದ್ರತೆ-ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ ಮಾ.1 : ಉದ್ಯಮಿ ಮುಕೇಶ್ ಅಂಬಾನಿಯವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲೂ ಝಡ್ ಪ್ಲಸ್ ಗರಿಷ್ಠ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಬಗ್ಗೆ ನಿರ್ದೇಶನ ನೀಡಿರುವ ಸುಪ್ರೀಮ್ ಕೋರ್ಟ್‍ನ ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಆಹ್ವಾನುದ್ದಿನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠವು ಬೆದರಿಕೆ ಹಿನ್ನೆಲೆಯಲ್ಲಿ ಇಂತಿಷ್ಟೇ ಪ್ರದೇಶಕ್ಕೆ ಭದ್ರತೆಯನ್ನು ಮಿತಿಗೊಳಿಸಬಾರದು. `ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುವ ಝಡ್ ಪ್ಲಸ್ ಭದ್ರತೆಯನ್ನು ವಿದೇಶಗಳಿಗೆ ತೆರಳಿದಾಗಲೂ ನೀಡಬೇಕು. ಮಹಾರಾಷ್ಟ್ರ ಸರ್ಕಾರ ಮತ್ತು ಗೃಹ ಸಚಿವಾಲಯವು ಇದನ್ನು ಖಚಿತಪಡಿಸಬೇಕು’ ಎಂದು ಹೇಳಿದೆ.
ಹಾಗೂ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶದಲ್ಲಿ ನೀಡಲಾಗುವ ಭದ್ರತೆಯ ವೆಚ್ಚವನ್ನೂ ಅವರೇ ಭರಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅಂಬಾನಿ ಉದ್ಯಮವು ದೇಶ ವಿದೇಶಗಳಲ್ಲೂ ಹರಡಿಕೊಂಡಿದ್ದು, ಭದ್ರತೆಯನ್ನು ಮಿತಿಗೊಳಿಸುವುದು ಸೂಕ್ತವಲ್ಲ. ಪ್ರತಿವಾದಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಒದಗಿಸಲಾಗಿರುವ ಭದ್ರತೆಯು ವಿವಾದದ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!