ಉಡುಪಿ: ಮಾ.3-5 ರೋಟರಿ ಜಿಲ್ಲೆ 3182ರ 7ನೇ ಜಿಲ್ಲಾ ಸಮ್ಮೇಳನ
ಉಡುಪಿ ಮಾ.1(ಉಡುಪಿ ಟೈಮ್ಸ್ ವರದಿ): ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 31824ರ 7 ನೆಯ ಜಿಲ್ಲಾ ಸಮ್ಮೇಳನವು ಮಾ.3 ರಿಂದ 5 ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ರೊ. ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್ ಅವರು ಹೇಳಿದ್ದಾರೆ.
ಜಯ ಹೋ 2023 ಶೀರ್ಷಿಕೆಯಡಿಯಲ್ಲಿ ಕನೆಕ್ಟ್ ಆಗೋಣ ಎಂಬ ಘೋಷಣೆ ಯೊಂದಿಗೆ ಉಡುಪಿಯ ಮಿಷನ್ ಆಸ್ಪತ್ರೆ ರಸ್ತೆಯ ಬಿಎಂಎಂ ಸಭಾಂಗಣದಲ್ಲಿ ನಡೆಯುವ ರೋಟರಿ ಜಿಲ್ಲಾ ಸಮ್ಮೇಳನವನ್ನು ಮೈಸೂರಿನ ರಾಜಮಾತೆ ಡಾ ಪ್ರಮೋದ ದೇವಿ ಒಡೆಯರ್ ರವರು ಉದ್ಘಾಟಿಸಲಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ನಾರಾಯಣ ಇನ್ಸಿಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ನ ನಿರ್ದೇಶಕರಾದ ಡಾ ತಿಮ್ಮಪ್ಪ ಹೆಗ್ಡೆಯವರು ನಿಯೋಜಿತ ಭಾಷಣ ಮಾಡಲಿದ್ದಾರೆ. ರೋಟರಿ ಜಿಲ್ಲಾ 3201 ಮಾಜಿ ಜಿಲ್ಲಾ ಗವರ್ನರ್ ರೊ. ಎ.ವಿ. ಪತಿ ಮತ್ತು ಅವರ ಧರ್ಮಪತ್ನಿ ವೀಣಾ ಪತಿಯವರು ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆತಿಥೇಯ ರೋಟರಿ ಜಿಲ್ಲೆ 3182ರ ಗೌರವಾನ್ವಿತ ಜಿಲ್ಲಾ ಗವರ್ನರ್ ರೊ. ಡಾ. ಜಯಗೌರಿಯವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ರೋಟರಿಯ ಮಾಜಿ ನಿರ್ದೇಶಕರಾದ ರೊ. ಡಾ. ಮನೋಜ್ ದೇಸಾಯಿ
, ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಮಾಜಿ ಜಿಲ್ಲಾ ಗವರ್ನರ್ ಡಾ. ಎಚ್ ಶಾಂತಾರಾಮ್, ಜಿಲ್ಲಾ ತರಬೇತುದಾರರಾದ ಮಾಜಿ ಜಿಲ್ಲಾ ಗವರ್ನರ್ ರೊ. ಅಭಿನಂದನ್ ಶೆಟ್ಟಿ, ಜಿಲ್ಲಾ ಸಲಹೆಗಾರರಾದ ಮಾಜಿ ಜಿಲ್ಲಾ ಗವರ್ನರ್ ಡಿ ಎಸ್ ರವಿ, ಜಿಲ್ಲಾ ರೋಟರಿ ಫೌಂಡೇಶನ್ ಛೇರ್‌ಮನ್ ಮಾಜಿ ಜಿಲ್ಲಾ ಗವರ್ನರ್ ಡಾ. ಪಿ ನಾರಾಯಣ, ನಿಯೋಜಿತ ಜಿಲ್ಲಾ ಗವರ್ನರ್ ರೊ. ಬಿಸಿ ಗೀತಾ, ಡಿಜಿಎನ್ ರೊ. ಸಿ ಎ ದೇವಾನಂದ್, ಡಿಜಿಎನ್‌ಡಿ ರೊ. ಪಾಲಾಕ್ಷ, ಸಮ್ಮೇಳನ ಸಮಿತಿಯ ಸಹ ಅಧ್ಯಕ್ಷ ಡಾ ಗಿರಿಜ, ಸಲಹೆಗಾರರಾದ ಮಾಜಿ ಜಿಲ್ಲಾ ಗವರ್ನರ್ ಡಾ ಭರತೇಶ್, ಬಿ ಎನ್ ರಮೇಶ್, ರಾಜಾರಾಮ ಭಟ್, ಜಿಲ್ಲಾ ಕಾರ್ಯದರ್ಶಿಗಳಾದ ರೊ. ಅಮಿತ್ ಅರವಿಂದ್ ಮತ್ತು ಸುಬ್ರಹ್ಮಣ್ಯ ಬಾಸ್ತಿ ಹಾಗೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ರೇಣು ಜಯರಾಮ್, 11 ವಲಯಗಳ ಅಸಿಸ್ಟೆಂಟ್ ಗವರ್ನರುಗಳು, ವಲಯ ನಾಲ್ಕರ ಕ್ಲಬ್ ಗಳ ಅಧ್ಯಕ್ಷರು ಉದ್ಘಾಟ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರಂಭದಲ್ಲಿ ಅತಿಥಿಗಳನ್ನು ಆಕರ್ಷಕ ಮೆರವಣಿಗೆಯೊಂದಿಗೆ ಬರಮಾಡಿಕೊಂಡು, ಅತಿಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ರಾಷ್ಟ್ರಧ್ವಜಾರೋಹಣ, ರೋಟರಿ ಧ್ವಜ ಅರಳಿಸುವಿಕೆ, ಪ್ರದರ್ಶನ ಮಳಿಗೆಗಳ ಉದ್ಘಾಟನೆ, ತುಳುನಾಡ ವೈಭವವನ್ನು ಸಾರುವ ದರ್ಶನೀಯ ಅನಾವರಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು, ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಮ ಮತ್ತು ಅಂಗಾಗ ದಾನವನ್ನು ಉತ್ತೇಜಿಸುವುದು, ಸ್ತ್ರೀ ಸಶಕ್ತಿಕರಣ, ಜಲ ಯಾತ್ರಾ ಮತ್ತು ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಅಂದೋಲನ ಕುರಿತಾದ ವಿವಿಧ ಗೋಷ್ಟಿಗಳು, ಚರ್ಚಾ ಗೋಷ್ಠಿಗಳು ನಡೆಯಲಿದ್ದು ಯಕ್ಷಗಾನದ ಪ್ರದರ್ಶನ, ನೃತ್ಯ,ಸಂಗೀತ ರಸಮಂಜರಿ ಸಹಿತ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡರಯಲಿದೆ ಎಂದು ತಿಳಿಸಿದರು.
ಹಾಗೂ ಜಯ ಹೋ ಸಮ್ಮೇಳನದ ಸಮಾರೋಪ ಸಮಾರಂಭವು ಮಾ.5 ರಂದು ಆತಿಥೇಯ ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ರೊ ಡಾ. ಜಯಗೌರಿಯವರ ಅಧ್ಯಕ್ಷತೆಯಲ್ಲಿ ಜರಗಲಿದ್ದು, ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ಪಿಡಿಜಿ ರೊ ಎ ವಿ ಪತಿ ಸಮಾರೋಪ ಭಾಷಣಗೈಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಉಪ ಸಭಾಪತಿ ರೊ. ಡಾ ಗಿರಿಜಾ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ರೊ. ರೇಣು ಜಯರಾಮ್, ಜಿಲ್ಲಾ ಕಾರ್ಯದರ್ಶಿ (ಆಡಳಿತ) ರೂ ಅಮಿಶ್ ಅರವಿಂದ್, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರಾಮಚಂದ್ರ ಉಪಾಧ್ಯಾಯ ಮತ್ತು ಜಿಲ್ಲಾ ಜತೆ ಕಾರ್ಯದರ್ಶಿ (ಆಡಳಿತ) ರೊ ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.