ರಾಜ್ಯ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ ಬಿಜೆಪಿಯು ರೈತರಿಗೆ ಬಗೆದ ದ್ರೋಹ : ಕಾಂಗ್ರೆಸ್
ಉಡುಪಿ ಮಾ.1 : ರೈತರ ನೀರಿನ ಭವನೆ ಇಂಗಿಸುವಲ್ಲಿ ತಡೆಯೊಡ್ಡಿದ ಅಣ್ಣಾಮಲೈಯನ್ನು ಬಿಜೆಪಿಯು ರಾಜ್ಯ ಉಸ್ತುವಾರಿಯಾಗಿ ನೇಮಿಸಿರುವುದು ರಾಜ್ಯದ ಜನತೆಗೆ ಬಿಜೆಪಿ ಬಗೆದ ದ್ರೊಹವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಸಿಕೊಳ್ಳಲು ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅಣ್ಣಾಮಲೈಯವರ ಹೇಳಿಕೆ ಬಗ್ಗೆ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಅವರು, ರಾಜ್ಯದಲ್ಲಿ ಸರಕಾರಿ ಹುದ್ದೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಣ್ಣಾಮಲೈಯವರು ಒಮ್ಮಿಂದೊಮ್ಮೆಗೆ ರಾಜಕೀಯ ಪ್ರವೇಶಮಾಡಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನಿಯುಕ್ತಿಗೊಂಡವರು ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಕೂಡಲೇ ಕರ್ನಾಟಕ ರಾಜ್ಯದ ರೈತರಿಗೆ ನೀರಿನ ಆಶ್ರಯ ಒದಗಿಸುವ ಮೇಕೆದಾಟು ಯೋಜನೆಗೆ ಪ್ರತಿಭಟಿಸುವ ಮೂಲಕ ರಾಜ್ಯ ರೈತರ ಬೆನ್ನಿಗೆ ಚೂರಿ ಹಾಕಿದವರು ರೈತರ ನೀರಿನ ಭವನೆ ಇಂಗಿಸುವಲ್ಲಿ ತಡೆಯೊಡ್ಡಿದ ಅಣ್ಣಾಮಲೈಯನ್ನು ಬಿಜೆಪಿಯು ರಾಜ್ಯ ಉಸ್ತುವಾರಿಯಾಗಿ ನೇಮಿಸಿರುವುದು ರಾಜ್ಯದ ಜನತೆಗೆ ಬಿಜೆಪಿ ಬಗೆದ ದ್ರೊಹ ವಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಸಿಕೊಳ್ಳಲು ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅಣ್ಣಾಮಲೈಯವರ ಹೇಳಿಕೆ ಬಾಲಿಷವಾಗಿದೆ. ರಾಜ್ಯದಲ್ಲಿ ಬಹುಮತವಿದ್ದ ಕಾಂಗ್ರೆಸ್-ಜೆಡಿಸ್ ಸರಕಾರದ 17 ಶಾಸಕರನ್ನು ಆಪರೆಷನ್ ಕಮಲದ ಮೂಲಕ ಖರೀದಿಸಿದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಬಿಜೆಪಿಯು ಈ ಶಾಸಕರನ್ನು ಖರೀದಿಸಲು ಯಾವ ಎಟಿಎಂ ಬಳಸಿದ್ದಾರೆ ಎಂಬುವುದನ್ನು ಅಣ್ಣಾಮಲೈಯವರು ಸ್ವಷ್ಟಪಡಿಸಬೇಕು ಎಂದು ಹೇಳಿದ್ದಾರೆ. ಹಾಗೂ 2018 ರ ಚುನಾವಣಾ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 50 ನ್ನು ಮಾತ್ರ ಈಡೇರಿಸಿದೆ. ಆದರೆ 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 169 ಭರವಸೆಗಳನ್ನು ನೀಡಿದ್ದು 165 ನ್ನು ಈಡೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯು ಈಗಾಗಲೇ ಗುತ್ತಿಗೆದಾರರಿಂದ ಪಡೆದ 40% ಕಮಿಷನ್ ಹಣವನ್ನು ಚುನಾವಣೆ ಎದುರಿಸಲು ಎಟಿಎಂ ಆಗಿ ಬಳಸುವ ಸಾಧ್ಯತೆಯಿದೆ ಎಂದ ಅವರು, 7 ವರ್ಷಗಳ ಹಿಂದೆ ರಾಜ್ಯದಲ್ಲಿ ಸರಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಎಲ್ಲಡೆ ಖಡಕ್ ಹಾಗೂ ನಿರ್ಭಿತ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಣ್ಣಾಮಲೈಯವರು ಬಿಜೆಪಿಗೆ ಸೆರ್ಪಡೆಗೊಂಡ ಕೂಡಲೇ ಸುಳ್ಳು ಹೇಳಲು ಪ್ರಾರಂಭಿಸಿರುದನ್ನು ನೋಡಿದರೆ ಅವರು ಬಿಜೆಪಿಯಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎನ್ನುವುದಕ್ಕೆ ಸ್ವಷ್ಟ ಉದಾಹರಣೆ. ಡಬಲ್ ಇಂಜಿನ್ ಸರಕಾರದಿಂದಲೇ ಜನರು ಸಮಸ್ಯೆಯನ್ನು ಎದುರಿಸುತ್ತಿರುವುದು ಅವರ ಅರಿವಿಗೆ ಬರಲಿಲ್ಲವೇ ನೋಟು ಅಮಾಣ್ಯೀಕರಣ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಜಿಎಸ್ ಟಿ ಹೇರಿಕೆ, ಕೆಟ್ಟ ಆರ್ಥಿಕ ನೀತಿಗಳಿಂದ ಜನರ ವ್ಯಕ್ತಿಗತ ಆದಾಯ ಪಾತಾಳಕ್ಕೆ ಇಳಿದಿದೆ ಹೀಗಿರುವಾಗ ದೇಶ ಅಭಿವೃದ್ದಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎನ್ನುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ನಿವೃತ್ತಿ ಎನ್ನುವುದು ಎಲ್ಲಾ ಪಕ್ಷಗಳಲ್ಲಿ ಸಮಯ ಸಂದರ್ಭಗಳಲ್ಲಿ ಆಗುತ್ತಿರುತ್ತದೆ ಆದರೆ ಪಕ್ಷ ಕಟ್ಟಿದ ಮುಖಂಡರನ್ನು ಮೂಲೆಗುಂಪು ಮಾಡಿದ ಹೆಗ್ಗಳಿಕೆ ಬಿಜೆಪಿಗೆ ಸಲ್ಲುತ್ತದೆ ಅಡ್ವಾನಿ ಹಾಗೂ ಯಡಿಯೂರಪ್ಪನವರನ್ನು ಅಣ್ಣಾಮಲೈಯವರು ಇಷ್ಟು ಬೇಗ ಮರೆಯಬಾರದಿತ್ತು. ಈಗ ಕುಟುಂಬ ರಾಜಕೀಯವು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಅದನ್ನು ಕಾಂಗ್ರೆಸ್ ಗೆ ಮಾತ್ರ ಸೀಮಿತಗೊಳಿಸುವ ಅಣ್ಣಾಮಲೈ ಹೇಳಿಕೆ ಇನ್ನೊಂದು ಸುಳ್ಳಿನ ಕಂತೆ ಎಂದು ತಿಳಿಸಿದ್ದಾರೆ.