ಉಡುಪಿ: ಕೆವೈಸಿ ಅಪ್‍ಡೇಟ್ ನೆಪದಲ್ಲಿ ವ್ಯಕ್ತಿ ಖಾತೆಯಿಂದ 1.94 ಲಕ್ಷ ರೂ. ಕಳವು

ಉಡುಪಿ ಮಾ.1 (ಉಡುಪಿ ಟೈಮ್ಸ್ ವರದಿ) : ಕೆ.ವೈ.ಸಿ ಅಪ್ ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ಆನ್ಲೈನ್ ಮೂಲಕ 1.94 ಲಕ್ಷ ರೂ. ದೋಚಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ ಕುತ್ಪಾಡಿ ಗ್ರಾಮದ ರೊನಾಲ್ಡ್ ಜೆ. ಸುಚಿತ್ತ ಇವರಿಗೆ ಫೆ.28 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‍ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ ನಂಬಿಸಿದ್ದಾನೆ. ಬಳಿಕ ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ಪಡೆದು ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 1,94,000 ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ವಂಚಿಸಿದ್ದಾನೆ ಎಂಬುದಾಗಿ ರೊನಾಲ್ಡ್ ಜೆ. ಸುಚಿತ್ತ ಅವರ ತಂದೆ ವಿಜಯ ಸುಚಿತ್ರ ಅವರು ನೀಡಿದ ದೂರಿನಂತೆ ಸೆನ್ ಅಪರಾಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!