ಕಾರ್ಕಳ ಶಾಸಕರೊಬ್ಬರ ಮೇಲೆ ಬೇನಾಮಿ ಆಸ್ತಿ ಆರೋಪ-ಸಮಗ್ರ ತನಿಖೆಗೆ ಮುತಾಲಿಕ್ ಮನವಿ

ಉಡುಪಿ ಮಾ.1 (ಉಡುಪಿ ಟೈಮ್ಸ್ ವರದಿ): ಕಾರ್ಕಳದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭೆ ಕ್ಷೇತ್ರದ ಶಾಸಕ, ರಾಜ್ಯದ “ಪವರ್ ಫುಲ್” ಸಚಿವರೂಬ್ಬರು ಕಾರ್ಕಳದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಮಾಡಿದ್ದಾರೆ.

ಶಾಸಕರ ವಿರುದ್ಧ ಬೇನಾಮಿ ಆಸ್ತಿ ಆರೋಪ ಮಾಡಿರುವ ಅವರು, ಕಾರ್ಕಳ ಕ್ಷೇತ್ರ ವ್ಯಾಪ್ತಿಯ ಹೆಬ್ರಿಯ ಶಿವಪುರದಲ್ಲಿ 67 ಎಕರೆ ಜಾಗವನ್ನು ಬೇನಾಮಿ ಹೆಸರಲ್ಲಿ ಖರೀದಿ ಮಾಡಿದ್ದಾರೆ. ವಿದ್ಯಾ ಸುವರ್ಣ ಮತ್ತು ಗಜಾನನ್ ದತ್ ದಂಪತಿ ಹೆಸರಲ್ಲಿ ಈ ಜಮೀನು ಖರೀದಿ ಮಾಡಲಾಗಿದೆ. 4 ಕೋಟಿ 15 ಲಕ್ಷ ಬೆಲೆಗೆ ಇದನ್ನು ಖರೀದಿಸಲಾಗಿದ್ದು, ಈಗ ಅದೇ ಜಾಗವನ್ನು ಸರಕಾರ ಇಂಡಸ್ಟ್ರಿಯಲ್ ಏರಿಯಾ ಎಂದು ಡಿಕ್ಲೇರ್ ಮಾಡಿದೆ. ಭ್ರಷ್ಟ ಮಂತ್ರಿಯ ಕೈವಾಡದಿಂದ ಈ ಖರೀದಿ ನಡೆದಿದೆ. ಈ ಬಗ್ಗೆ ತಮ್ಮಲ್ಲಿ ದಾಖಲೆಗಳಿದ್ದು ಚುನಾವಣೆಗೂ ಮುನ್ನ ಇದನ್ನು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇನ್ನು ಈ ಬೇನಾಮಿ ಆಸ್ತಿ ಭ್ರಷ್ಟಾಚಾರವನ್ನು ಆದಾಯ ತೆರಿಕಗೆ ಇಲಾಖೆ ಮತ್ತು ಲೋಕಾಯುಕ್ತ ಇಲಾಖೆ ಗಮನಕ್ಕೂ ತರುತ್ತೇವೆ. ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಶ್ರೀರಾಮಸೇನೆ ಹೇಳಿದೆ.

Leave a Reply

Your email address will not be published. Required fields are marked *

error: Content is protected !!