16 ಬಾರಿ ಇರಿದು ಪ್ರೇಯಸಿಯನ್ನೇ ಕೊಂದ ಪಾಗಲ್ ಪ್ರೇಮಿ
ಆಂದ್ರ ಪ್ರದೇಶ ಮಾ.1 : ಪ್ರೇಮಿಯೋರ್ವ ತನ್ನ ಪ್ರೇಯಸಿಗೆ 16 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂದ್ರಪ್ರದೇಶದ ಜೀವನ್ ಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲೀಲಾ ಪವಿತ್ರಾ ಕೊಲೆಯಾದ ಯುವತಿ. ಪ್ರಕರಣದ ಆರೋಪಿ ಪ್ರೇಮಿ ದಿವಾಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಲೀಲಾ ಪವಿತ್ರಾ ಎಂ.ಎಸ್ಸಿ ಪದವೀಧರೆಯಾಗಿದ್ದು, ಮುರುಗೇಶಪಾಳ್ಯದ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ಕಚೇರಿಯಿಂದ ಹೊರ ಬರುತ್ತಿರುವ ಸಮಯ ಪವಿತ್ರಾಳ ಮೇಲೆ ಆರೋಪಿ ದಿನಕರ್ ದಾಳಿ ಮಾಡಿದ್ದಾನೆ. ಆರೋಪಿ ದಿನಕರ್ ಆಂಧ್ರಪ್ರದೇಶದ ದೊಮ್ಮಲೂರು ಬಳಿಯ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಾ ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಅವರ ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕಡೆಯವರು ಒಪ್ಪಿರಲಿಲ್ಲ. ದಿನಕರ್ ಜೊತೆ ಮಾತನಾಡದಂತೆ ಯುವತಿಯ ಪೋಷಕರು ಯುವತಿಗೆ ತಾಕೀತು ಮಾಡಿದ್ದರು. ಹೀಗಾಗಿ ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ ದಿನಕರ್, ಲೀಲಾ ಪವಿತ್ರಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿ ಚಾಕು ಸಮೇತ ಕಚೇರಿ ಬಳಿ ಬಂದು ಕಾದು ಕುಳಿತಿದ್ದ. ಲೀಲಾ ಪವಿತ್ರಾ ಅವರು ಕಚೇರಿಯಿಂದ ಹೊರಬರುತ್ತಿದ್ದಂತೆ ಮಾತುಕತೆ ನೆಪದಲ್ಲಿ ಆರೋಪಿ ಅಡ್ಡಗಟ್ಟಿದ್ದ. ಇದೇ ಸಂದರ್ಭದಲ್ಲಿ ಅರೋಪಿ ದಿನಕರ್ ಪವಿತ್ರಾಳ ಹೊಟ್ಟೆಗೆ ಚಾಕುವಿನಿಂದ ಇರಿದು,ನಂತರ ಎದೆ, ಕುತ್ತಿಗೆ ಸೇರಿ ದೇಹದ 16 ಕಡೆಗಳಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರವಾದ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.