ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮತ್ತೊಂದು ಶಾಕ್
ನವದೆಹಲಿ: ಪೆಟ್ರೋಲ್ ಡೀಸೆಲ್ ಬೆ ಗಗನಕ್ಕೇರುತ್ತಿರುವ ಬೆನ್ನಲೇ ಕೇಂದ್ರ ಸರಕಾರ ಜನತೆ ಮತ್ತೊಂದು ಶಾಕ್ ನೀಡಿದೆ. ಇಂದಿನಿಂದ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹೊಸ ದರ ಇಂದಿನಿಂದಲೇ (ಫೆ.4) ಅನ್ವಯವಾಗಲಿದೆ.
ಈ ಬಗ್ಗೆ ತೈಲ ಕಂಪನಿಗಳು ಅಧಿಸೂಚನೆ ಹೊರಡಿಸಿದ್ದು, ಈ ಬಾರಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ಯೂನಿಟ್‌ಗೆ 25 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 184 ರೂ.ಗೆ ಏರಿಕೆ ಮಾಡಿದೆ. ಅದರಂತೆ ಏರಿಕೆಯಾದ ದರದ ಪ್ರಕಾರ ಎಲ್ಪಿಜಿ ಸಿಲಿಂಡರ್‌ಗೆ ಬೆಂಗಳೂರಿನಲ್ಲಿ ಇನ್ನು ಮುಂದೆ 697 ರೂ. ಬದಲು 722 ರೂ.ಗೆ ನೀಡಬೇಕಾಗುತ್ತದೆ.
ಇನ್ನು ನವದೆಹಲಿಯಲ್ಲಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರು 694 ರೂಪಾಯಿ ಬದಲು 719 ರೂ. ನೀಡಬೇಕಾಗುತ್ತದೆ. ನೋಯ್ಡಾದಲ್ಲಿ ಸಿಲಿಂಡಿರ್‌ಗೆ 717 ರೂ. ಹಾಗೂ ವಾಣಿಜ್ಯ (19 ಕೆಜಿ) ಎಲ್ಪಿಜಿ ಸಿಲಿಂಡರ್‌ಗೆ 1349 ರೂ. ನೀಡಬೇಕಾಗಿದೆ.
ಉಳಿದಂತೆ ಲಕ್ನೋದಲ್ಲಿ ಎಲ್ ಪಿಜಿ ಬೆಲೆ 757 ರೂ., ಕೋಲ್ಕತ್ತಾದಲ್ಲಿ 745.50 ರೂ., ಮುಂಬೈನಲ್ಲಿ 719 ರೂ., ಚೆನ್ನೈನಲ್ಲಿ 735 ರೂ., ಚಂಡೀಗಢದಲ್ಲಿ 728.50 ರೂ., ಹೈದರಾಬಾದ್’ನಲ್ಲಿ 771.50 ರೂ., ಗುರ್’ಗಾಂವ್’ನಲ್ಲಿ 728 ರೂ., ಜೈಪುರದಲ್ಲಿ 723 ರೂ., ಪಾಟ್ನಾದಲ್ಲಿ 792.50 ರೂ.
2020ರ ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು ಎಲ್ ಪಿಜಿ ದರವನ್ನು ಎರಡು ಬಾರಿ ಏರಕೆ ಮಾಡಿದ್ದವು ಆದರೆ 2021ರ ಜನವರಿಯಲ್ಲಿ ಎಲ್ಪಿಜಿ ದರದಲ್ಲಿ ಯಾವುದೇ ಬದಲಾವಣೆಯಾಗಿಲಿಲ್ಲ. ಇದೀಗ 2021ರ ಫೆಬ್ರವರಿಯಲ್ಲಿ ತೈಲ ಕಂಪನಿಗಳು ಎಲ್ಪಿಜಿ ಅನಿಲ ದರ ಏರಿಕೆ ಮಾಡಿವೆ. ಇದು ಮೊದಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಮತ್ತಷ್ಟು ಕಂಗೆಡುವಂತೆ ಮಾಡಿದೆ.