ಭಾರತೀಯ ಮೂಲದ ವ್ಯಕ್ತಿ ಬಹ್ರೇನ್ ನಲ್ಲಿ ಹೃದಯಾಘಾತದಿಂದ ನಿಧನ
ಮನಾಮಾ ಫೆ.28 : ಭಾರತೀಯ ಮೂಲದ ವ್ಯಕ್ತಿಯೋರ್ವರು ಬಹ್ರೇನ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕೆರಳದ ನಿಲಂಬೂರಿನ ಎಡಕ್ಕರ ಟೈಲರ್ ಮೂಸಾ ಅವರ ಪುತ್ರ ಮುಹಮ್ಮದ್ ತಯ್ಯಾಲ್ (46) ಮೃತಪಟ್ಟವರು. ಕೆಎಂಸಿಸಿ ಮಯ್ಯತ್ ನಿರ್ವಹಣಾ ಘಟಕದ ನೇತೃತ್ವದಲ್ಲಿ ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತರು ತಾಯಿ ಝೈನಾಬಾ, ಪತ್ನಿ ಸಬ್ನಾ ಮತ್ತು ಮಕ್ಕಳಾದ ಶಾದಿದ್, ಶಾಹಿದ್ ಮತ್ತು ಶಹಾನಾ ಅವರನ್ನು ಅಗಲಿದ್ದಾರೆ.
16 ವರ್ಷಗಳಿಂದ ಬಹ್ರೇನ್ ನಲ್ಲಿ ವಾಸಿಸುತ್ತಿದ್ದ ಅವರು ಮನಾಮಾದಲ್ಲಿ ಶಿಫ್ಟಿಂಗ್ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹಾಗೂ ಬಹ್ರೇನ್ ನ ಪ್ರಸಿದ್ಧ ಸಮಾಜ ಸೇವಕ ಸಲಾಂ ಮಾಂಬಟ್ಟುಮೂಲೆ ಅವರ ಸಹೋದರಿಯ ಮಗಳ ಪತಿ ಎಂದು ತಿಳಿದು ಬಂದಿದೆ.