ಸಹಕಾರಿ ಬ್ಯಾಂಕ್ ಗಳಿಗೆ ನಿರ್ಬಂಧ ವಿಧಿಸಿದ ಆರ್.ಬಿ.ಐ

ನವದೆಹಲಿ ಫೆ.25 : ದೇಶದ ಐದು ಸಹಕಾರಿ ಬ್ಯಾಂಕ್‍ಗಳ ಮೇಲೆ ಹಣ ಡ್ರಾ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಜಾರಿ ಮಾಡಿದೆ ಎಂದು ವರದಿಯಾಗಿದೆ.

ಬ್ಯಾಂಕ್ ನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ ಈ ಆದೇಶ ಹೊರಡಿಸಿದ್ದು, ಅದರಂತೆ ಈ ನಿರ್ಬಂಧಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ. ಆರ್.ಬಿ.ಐ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳು ಆರ್.ಬಿ.ಐನ ಪೂರ್ವಾನುಮತಿ ಇಲ್ಲದೆ, ಸಾಲಗಳನ್ನು ನೀಡಲು, ಯಾವುದೇ ಹೂಡಿಕೆ ಮಾಡಲು ಮತ್ತು ಯಾವುದೇ ಜವಾಬ್ದಾರಿಯನ್ನು ಹೊಂದಲು ಮತ್ತು ಅದರ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿಂಷಾ ಸಹಕಾರ ಬ್ಯಾಂಕ್, ಉತ್ತರ ಪ್ರದೇಶದ ಲಕ್ನೋದಲ್ಲಿರುವ ಊಅಃಐ ಸಹಕಾರ ಬ್ಯಾಂಕ್, ಮಹಾರಾಷ್ಟ್ರದ ಔರಂಗಾಬಾದ್ನಲ್ಲಿರುವ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್, ಆಂಧ್ರ ಪ್ರದೇಶದ ಅನಂತಪುರದ ಜಿಲ್ಲೆಯ ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಅಕ್ಲುಜ್ನಲ್ಲಿರುವ ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಗಳಿಗೆ ಈ ಆದೇಶ ನೀಡಿದೆ. ಎಲ್ಲಾ ಐದು ಸಹಕಾರಿ ಬ್ಯಾಂಕ್‍ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ನಿಂದ ತಮ್ಮ ತಮ್ಮ ಠೇವಣಿ ವಿಮೆ ಕ್ಲೈಮ್ ಮೊತ್ತದಲ್ಲಿ 5 ಲಕ್ಷ ರೂಪಾಯಿ ವರೆಗಿನ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಆರ್.ಬಿ.ಐ ತಿಳಿದಿದೆ.

ಆರ್.ಬಿ.ಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಐದು ಬ್ಯಾಂಕ್ ಗಳು ಮುಂದಿನ 6 ತಿಂಗಳ ಕಾಲ ಯಾವುದೇ ಸಾಲವನ್ನು ನೀಡುವಂತಿಲ್ಲ. ಆದರೆ ಗ್ರಾಹಕರು ಗರಿಷ್ಠ 5,000 ರೂಪಾಯಿಗಳನ್ನು ವಿತ್ಡ್ರಾ ಮಾಡಬಹುದಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!