ಪಡುಬಿದ್ರಿ: ದೋಣಿ ಮಗುಚಿ ಬಿದ್ದು ಮೀನುಗಾರ ಮೃತ್ಯು

ಸಾಂದರ್ಭಿಕ ಚಿತ್ರ

ಪಡುಬಿದ್ರಿ ಫೆ.25 : ಅಳಿವೆಬಾಗಿಲಿನಲ್ಲಿ ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ನಾಡದೋಣಿಯೊಂದು ಮುಗುಚಿ ಬಿದ್ದು ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಹೆಜಮಾಡಿ ಕೋಡಿ ನಿವಾಸಿ ಪದ್ಮನಾಭ ಸುವರ್ಣ (46) ಮೃತಪಟ್ಟವರು. ಪದ್ಮನಾಭ ಸುವರ್ಣ ಅವರ ಮೃತದೇಹವು ನಿನ್ನೆ ಹೆಜಮಾಡಿ ಕೋಡಿಯಲ್ಲಿ ಪತ್ತೆಯಾಗಿದೆ.

ಹೆಜಮಾಡಿ ಕೋಡಿಯಿಂದ ಮುಂಜಾನೆ ವೇಳೆಗೆ ಮೀನುಗಾರಿಕೆಗೆ ಹೊರಟಿದ್ದ ನಾಡದೋಣಿ ಅಳಿವೆಬಾಗಿಲಿನಲ್ಲಿ ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ಈ ವೇಳೆ ದೋಣಿಯಲ್ಲಿದ್ದ ಇನ್ನೋರ್ವ ಮೀನುಗಾರ ಈಜಿ ದಡ ಸೇರಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!