ಆಕಸ್ಮಿಕವಾಗಿ ಗುಂಡು ತಗುಲಿ ಯೋಗಿ ಆದಿತ್ಯನಾಥ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೃತ್ಯು

ಲಕ್ನೋ ಫೆ.25 : ಆಕಸ್ಮಿಕವಾಗಿ ತನ್ನ ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತೆಗೆ ನಿಯೋಜಿತರಾಗಿದ್ದ ಹೆಡ್ ಕಾನ್ಸ್‌ಟೆಬಲ್ ವೊಬ್ಬರು ಮೃತಪಟ್ಟ ಘಟನೆ ಲಕ್ನೋದಲ್ಲಿ ನಡೆದಿದೆ.

ಹೆಡ್ ಕಾನ್ಸ್ಟೇಬಲ್ ಸಂದೀಪ್ ಯಾದವ್ ಮೃತ ಪೊಲೀಸ್ ಸಿಬ್ಬಂದಿ. ಸಂದೀಪ್ ಯಾದವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಂದೀಪ್ ಯಾದವ್ ಶನಿವಾರದಂದು ಕರ್ತವ್ಯಕ್ಕೆ ಸೇರಬೇಕಿತ್ತು. ಮಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅವರ ಮನೆಯಲ್ಲಿ ತಮ್ಮ ರಿವಾಲ್ವರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ರಿವಾಲ್ವರ್‌ನಿಂದ ಗುಂಡು ಹಾರಿದೆ. ಈ ವೇಳೆ ಗುಂಡು ಸಂದೀಪ್ ಯಾದವ್ ಅವರ ತಲೆಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

1 thought on “ಆಕಸ್ಮಿಕವಾಗಿ ಗುಂಡು ತಗುಲಿ ಯೋಗಿ ಆದಿತ್ಯನಾಥ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಮೃತ್ಯು

  1. Corruption is in corrigible unless elected representatives
    Take oath on corruption free regime.
    That too in BDA more regularities and it has become
    Bribe Development Authority. In spite of court
    Orders still no alternative site given to site losers
    In Ramasandra village of sir M.V.layout near
    Kengeri satellite town.

Leave a Reply

Your email address will not be published. Required fields are marked *

error: Content is protected !!