ಬ್ರಹ್ಮಾವರ: ಫೆ.26-“ಉಚಿತ ನೇತ್ರ ತಪಾಸಣಾ ಶಿಬಿರ”
ಉಡುಪಿ ಫೆ.25 (ಉಡುಪಿ ಟೈಮ್ಸ್ ವರದಿ): ಕೆ. ಕೃಷ್ಣಮೂರ್ತಿ ಅಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕೆ. ಕೃಷ್ಣಮೂರ್ತಿ ಅಚಾರ್ಯ ಅಭಿಮಾನಿ ಬಳಗ ಬ್ರಹ್ಮಾವರ ಇವರ ವತಿಯಿಂದ ‘ಉಚಿತ ನೇತ್ರ ತಪಾಸಣಾ ಶಿಬಿರ’ ವು ಫೆ.26 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಾವರದ ನಿರ್ಮಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂದತ್ವ ವಿಭಾಗ) ಉಡುಪಿ, ಡಾ.ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ , ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ, ಇಂದಿರಾ ಸೇವಾ ವೇದಿಕೆ ಬ್ರಹ್ಮಾವರ, ಶ್ರೀ ಮಂಜುನಾಥೇಶ್ವರ ಮಹಿಳಾ ಭಜನಾ ಮಂಡಳಿ ಉಪ್ಪಿನಕೋಟೆ ಇವರ ಸಹಯೋಗದೊಂದಿಗೆ ನಡೆಯುವ ಈ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಬೆಳಿಗ್ಗೆ 8 ಗಂಟೆಯಿಂದ 10.30ರ ವರೆಗೆ ನೋಂದಣಿ ನಡೆಯಲಿದ್ದು, ಬೆಳಿಗ್ಗೆ 9.00 ಯಿಂದ ನೋಂದಣಿ ಆದ ಎಲ್ಲಾ ವ್ಯಕ್ತಿಗಳ ತಪಾಸಣೆ ಆಗುವವರೆಗೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಡುಪಿ ಪ್ರಸಾದ್ ನೇತಾಲಯ ಕಣ್ಣಿನ ಆಸ್ಪತ್ರೆಗೆ ಆಸ್ಪತ್ರೆಯ ವಾಹನದಲ್ಲಿ ಸಂಪೂರ್ಣ ಉಚಿತವಾಗಿ ಕರೆದುಕೊಂಡು ಹೋಗಿ ಮರುದಿನ ವಾಪಸ್ ಕರೆತಂದು ಬಿಡಲಾಗುವುದು. ಕನ್ನಡಕದ ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು. ಇದರ ಜೊತೆಗೆ ಶಿಬಿರದಲ್ಲಿ ಇತರ ಸೌಲಭ್ಯಗಳು ಉಚಿತವಾಗಿ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.