ಬಾಳ ತೊತ್ತಾಡಿ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಜೀರ್ಣೋದ್ದಾರ ಕಾಮಗಾರಿಗೆ ಶಿಲಾನ್ಯಾಸ
ಸುರತ್ಕಲ್ ಫೆ.24 (ಉಡುಪಿ ಟೈಮ್ಸ್ ವರದಿ) : “ಎಲ್ಲರೂ ಒಂದುಗೂಡಿ ದೇವರನ್ನು ಸ್ಮರಿಸಿದಾಗ ಅಥವಾ ದುಡಿದಾಗ ಅಲ್ಲಿ ದೇವರು ಪ್ರಸನ್ನರಾಗುತ್ತಾರೆ, ಯಶಸ್ಸು ಲಭಿಸುತ್ತದೆ” ಎಂದು ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅನಂತ ಪದ್ಮನಾಭ ಅಸ್ರಣ್ಣ ಹೇಳಿದ್ದಾರೆ.
ಬಾಳ ತೊತ್ತಾಡಿ ನಾಗಬ್ರಹ್ಮಸ್ಥಾನ ಹಾಗೂ ಪರಿವಾರ ದೈವ ದೇವರುಗಳ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತಾಡಿದ ಅವರು, “ದೇವಸ್ಥಾನದ ಬ್ರಹ್ಮಕಲಶಕ್ಕೆ ಈಗಾಗಲೇ ದಿನ ನಿಗದಿಯಾಗಿದ್ದು ಭಕ್ತರು ಕೈಜೋಡಿಸುವ ಮೂಲಕ ಅಭಿವೃದ್ಧಿ ಕಾರ್ಯವನ್ನು ಯಶಸ್ವಿಗೊಳಿಸಬೇಕು” ಎಂದರು.
ಈ ವೇಳೆ ಮಾತಾಡಿದ ಕ್ಷೇತ್ರದ ತಂತ್ರಿಗಳಾದ ಅನಂತ ಪದ್ಮನಾಭ ತಂತ್ರಿ ಅವರು, “ದೇವರ ಅನುಗ್ರಹವಿಲ್ಲದೆ ಏನೂ ನಡೆಯುವುದಿಲ್ಲ. ದೇವರ ಅನುಗ್ರಹದಿಂದ ನಾವೆಲ್ಲರೂ ಒಂದಾಗಿದ್ದೇವೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಈಗಾಗಲೇ ಚಾಲನೆ ದೊರೆತಿದ್ದು ಊರ ಪರವೂರ ಭಕ್ತರು ಕಾಯಾ ವಾಚಾ ಮನಸಾ ದುಡಿಯೋಣ” ಎಂದು ಹೇಳಿದರು.
ವೇದಿಕೆಯಲ್ಲಿ ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್, ಅನಂತಪದ್ಮನಾಭ ತಂತ್ರಿ, ಡಾ. ರೋಹಿತ್ ಬೆಂಗಳೂರು, ಅನಿಲ್ ಶೆಟ್ಟಿ ಬಾಳ ಕೆಳಗಿನಮನೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಆದಿತ್ಯ ಮುಕ್ಕಾಲ್ದಿ ಖಂಡಿಗೆ ಬೀಡು, ಮುಂಬೈ ಸಮಿತಿ ಅಧ್ಯಕ್ಷ ಕುಶಲ ಭಂಡಾರಿ, ದಿವಾಕರ ಆಳ್ವ ತೋಕೂರುಗುತ್ತು, ಜಯ ಶೆಟ್ಟಿ ಕುಡುಂಬೂರುಗುತ್ತು, ಬಾಳ ಪಂಚಾಯತ್ ಅಧ್ಯೆಕ್ಷೆ ಹುಲಿಗಮ್ಮ, ಸುಜಿತ್ ಆಳ್ವ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಆಡಳಿತ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಸಣ್ಣ ಚೌಟ ಬಾಳ ಮೇಗಿನಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಿತ್ತರಂಜನ್ ಭಂಡಾರಿ, ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಬಾಳದಗುತ್ತು, ಆಡಳಿತ ಸಮಿತಿಯ ಕಾರ್ಯದರ್ಶಿ ವೇಣುವಿನೋದ್ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಕೆ., ಸಂತೋಷ್ ಪೈ, ಬಿಎಎಸ್ ಎಫ್, ಕಿರಣ್ ಎಂಆರ್ ಪಿಎಲ್, ಗಣೇಶಪುರ ದೇವಸ್ಥಾನದ ಅಧ್ಯಕ್ಷ ಧಮೇಂದ್ರ, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಅರುಣ್ ಚೌಟ, ಇಂಜಿನಿಯರ್ ಗಳಾದ ಸಂತೋಷ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಬಿ ರವೀಂದ್ರ ರಾವ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಬಾಳ, ಕೋಶಾಧಿಕಾರಿ ಜಯಲಕ್ಷೀ ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬಾಳ ಸಾನದ ಹೊನೆ, ಚಿತ್ತರಂಜನ್ ಭಂಡಾರಿ, ವೇಣು ವಿನೋದ್ ಶೆಟ್ಟಿ, ಪುಷ್ಪರಾಜ ಅಡಪ, ಯತಿರಾಜ ಡಿ ಸಾಲ್ಯಾನ್, ಶಕುಂತಳಾ ನಾಗೇಶ್ ಶೆಟ್ಟಿ ಬಾಳ ಸಾನದ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.