ಹಳಿ ಮೇಲೆ ಕಿರುಚಿತ್ರ ಶೂಟ್ ಮಾಡುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತ್ಯು

ನವದೆಹಲಿ ಫೆ.24 : ರೈಲ್ವೆ ಹಳಿಗಳ ಮೇಲೆ ನಿಂತು ಮೊಬೈಲ್‍ನಲ್ಲಿ ವಿಡಿಂಯೋ ಚಿತ್ರೀಕರಿಸುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಕಾಂತಿ ನಗರ ಮೇಲ್ವೇತುವೆ ಬಳಿ ನಡೆದಿದೆ.

ಮೃತರನ್ನು ಕಾಂತಿ ನಗರದ ನಿವಾಸಿಗಳಾದ ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿ ವಂಶ್ ಶರ್ಮಾ (23) ಮತ್ತು ಸೇಲ್ಸ್ ಮ್ಯಾನ್ ಮೋನು (20) ಎಂದು ಗುರುತಿಸಲಾಗಿದೆ.

ಯುವಕರು ಮೊಬೈಲ್‍ನಲ್ಲಿ ಕಿರುಚಿತ್ರಗಳನ್ನು ಚಿತ್ರೀಕರಿಸುತ್ತಿದ್ದು, ಆಗಾಗ ಲೈವ್ ವಿಡಿಯೊಗಳನ್ನು ಮಾಡಲು ರೈಲ್ವೆ ಹಳಿಗಳ ಬಳಿ ಬರುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಅವರ ಮೊಬೈಲ್‍ಗಳು ರೈಲ್ವೆ ಟ್ರ್ಯಾಕ್‍ನಲ್ಲಿ ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!