ಶಿವಪಾಡಿಯ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗದ 2ನೇ ದಿನದ ಕಾರ್ಯಕ್ರಮ

ಮಣಿಪಾಲ ಫೆ.24 (ಉಡುಪಿ ಟೈಮ್ಸ್ ವರದಿ): ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ 2ನೇ ದಿನದ ಕಾರ್ಯಕ್ರಮ ನಡೆಯಿತು.

2 ನೇ ದಿನದ ಸಭಾ ಕಾರ್ಯಕ್ರಮವನ್ನು ಕೃಷ್ಣಪ್ಪ ಸಾಮಂತ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಸ್ಥಾಪಕ ಶ್ರೀಧರ್ ಕೆ. ಸಾಮ0ತ್ ಅವರು ಉದ್ಘಾಟಿಸಿದರು. ಈ ವೇಳೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ ದಕ್ಷ-ಯಜ್ಞ ಹರಿಕಥೆ ಜರುಗಿತು.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಶಾಸಕ ರಘುಪತಿ ಭಟ್, ಬೆಂಗಳೂರಿನ ಬಾಲ ವಾಗ್ಮಿ ಹಾರಿಕಾ ಮಂಜುನಾಥ್, ಉಡುಪಿಯ ಶಿವಾನಿ ಡೈಗೋಸ್ಟಿಕ್ ಸೆಂಟರ್ ನ ಮಾಲೀಕ ಮತ್ತು ವಿಜ್ಞಾನಿ ಡಾ. ಶಿವಾನಂದ ನಾಯಕ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿಯ ಸ್ವದೇಶಿ ಔಷಧ ಭಂಡಾರದ ಉದ್ಯಮಿ ಭರತ್ ಪ್ರಭು, ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಸಾಮಂತ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಉಪಾಧ್ಯಕ್ಷ ಅಶೋಕ್ ಪ್ರಭು, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಉಡುಪಿಯ ಕೂಟ ಮಹಾಜಗತ್ತಿನ ಅಧ್ಯಕ್ಷ ಡಾ. ಎ. ಗಣೇಶ್, ಅತಿರುದ್ರ ಮಹಾಯಾಗದ ಸಂಚಾಲಕ ಡಾ. ನಾರಾಯಣ ಶೆಣೈ, ಅತಿರುದ್ರ ಮಹಾಯಾಗದ ಉಗ್ರಾಣ ಸಮಿತಿಯ ಸಂಚಾಲಕ ಪ್ರಕಾಶ್ ಪ್ರಭು, ಮಹಾಯಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಮಹಿಳಾ ಕಾರ್ಯಕರ್ತೆ ಡಾ. ಆಶಾ ಪಾಟೀಲ್, ದೇವಸ್ಥಾನದ ಮೊಕ್ತೇಸರ ಸುಭಾಕರ್ ಸಾಮಂತ್ ಮತ್ತು ದಿನೇಶ್ ಪ್ರಭು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!