ಅದಾನಿ-ಹಿಂಡೆನ್‌ಬರ್ಗ್ ವರದಿ ಮಾಡದಂತೆ ಮಾಧ್ಯಮಕ್ಕೆ ತಡೆಯಾಜ್ಞೆ ನೀಡುವುದಿಲ್ಲ-ಸುಪ್ರೀಂ ಕೋರ್ಟ್
ಹೊಸದಿಲ್ಲಿ ಫೆ.24 : ಅದಾನಿ-ಹಿಂಡೆನ್‌ಬರ್ಗ್ ವಿಚಾರವಾಗಿ ವರದಿ ಮಾಡದಂತೆ ಮಾಧ್ಯಮಕ್ಕೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅದಾನಿ-ಹಿಂಡೆನ್‌ಬರ್ಗ್ ವಿಚಾರವಾಗಿ ನ್ಯಾಯಾಲಯವು ಆದೇಶವನ್ನು ಪ್ರಕಟಿಸುವವರೆಗೆ ಮಾಧ್ಯಮಗಳು ಆ ವಿಷಯದ ಕುರಿತು ವರದಿ ಮಾಡದಂತೆ ನಿರ್ಬಂಧಿಸಬೇಕೆಂಬ ವಕೀಲ ಎಂ.ಎಲ್. ಶರ್ಮಾ ಮಾಡಿದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ “ನಾವು ಎಂದಿಗೂ ಮಾಧ್ಯಮದ ವಿರುದ್ಧ ಯಾವುದೇ ತಡೆಯಾಜ್ಞೆ ನೀಡಲು ಹೋಗುವುದಿಲ್ಲ” ಎಂದು ಹೇಳಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ವಿರುದ್ಧ ತನಿಖೆಯನ್ನು ಕೋರಿ ಪಿಐಎಲ್ ಸಲ್ಲಿಸಿರುವ ಶರ್ಮಾ, ಮಾಧ್ಯಮವು ಸಂಚಲನವನ್ನು ಸೃಷ್ಟಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ವಿನಂತಿಯನ್ನು ಪುನರಾವರ್ತಿಸಿದಾಗ “ಸಮಂಜಸವಾದ ವಾದವನ್ನು ಮಾಡಿ, ಮಾಧ್ಯಮಕ್ಕೆ ತಡೆಯಾಜ್ಞೆ ನೀಡುವುದಿಲ್ಲ” ಎಂದು ಸಿಜೆಐ ಚಂದ್ರಚೂಡ್ ಸ್ಪಷ್ಟಪಡಿಸಿದರು. ಹಾಗೂ ಈ ಬಗ್ಗೆ ಪೀಠವು ಶೀಘ್ರದಲ್ಲೇ ಆದೇಶಗಳನ್ನು ನೀಡಲಿದೆ ಎಂದು ಹೇಳಿದರು.