ಉಡುಪಿ: ನಗರದ ಸರಕಾರಿ ಆಸ್ಪತ್ರೆಯಿಂದ ರೋಗಿ ನಾಪತ್ತೆ

ಉಡುಪಿ ಫೆ.24 (ಉಡುಪಿ ಟೈಮ್ಸ್ ವರದಿ): ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದ ರೋಗಿಯೊಬ್ಬರು ಫೆ.21 ರಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಬೆಳ್ಳಂಪಳ್ಳಿ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಜಯರಾಮ್ ಕಾಮತ್ (46) ನಾಪತ್ತೆಯಾದವರು. ಅನಾರೋಗ್ಯದಿಂದ ಬಳಲುತ್ತಿದ್ದ ಜಯರಾಮ್ ಕಾಮತ್ ಅವರನ್ನು ಫೆ.16 ರಂದು ಬೆಳಿಗ್ಗೆ ಜಾಂಡಿಸ್ ಖಾಯಿಲೆ ಉಲ್ಭಣಗೊಂಡ ಕಾರಣ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಫೆ.21 ರಂದು ಮಧ್ಯಾಹ್ನದ ವೇಳೆ ಜಯರಾಮ ಅವರೊಂದಿಗೆ ಇದ್ದ ಅವರ ಅಣ್ಣ ಆಸ್ಪತ್ರೆಯಿಂದ ಮನೆಗೆ ಹೋಗಿದ್ದು, ಮರುದಿನ ಅವರು ಆಸ್ಪತ್ರೆಗೆ ಹೋದಾಗ ಅಲ್ಲಿ ಜಯರಾಮ್ ಕಾಮತ್ ರವರು ಇಲ್ಲದೆ ಇದ್ದು, ಅವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂಬುದಾಗಿ ಜಯರಾಮ ಅವರ ಅಣ್ಣ ಶ್ರೀಪತಿ ಕಾಮತ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!