ರಾಜ್ಯದ 5 ಮತ್ತು 8ನೇ ತರಗತಿ ವಾರ್ಷಿಕ ವೇಳಾಪಟ್ಟಿ ಪ್ರಕಟ: ಮಾ.13ರಿಂದ ಪರೀಕ್ಷೆ ಆರಂಭ
ಬೆಂಗಳೂರು ಫೆ.24 : ರಾಜ್ಯದ 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ. ಪ್ರಕಟಿತ ವೇಳಾಪಟ್ಟಿಯಂತೆ ಮಾರ್ಚ್ 13ರಿಂದ 5 ಮತ್ತು 8ನೇ ತರಗತಿಯ ಪರೀಕ್ಷೆಗಳು ಆರಂಭಗೊಳ್ಳಲಿವೆ ಎಂದು ತಿಳಿದು ಬಂದಿದೆ.
5 ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ
ಮಾ.13 ರಂದು – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಇಂಗ್ಲೀಷ್( ಎನ್ ಸಿ ಆರ್ ಟಿ ), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮತ್ತು ಸಂಸ್ಕೃತ.
ಮಾ.14 ರಂದು – ದ್ವಿತೀಯ ಭಾಷೆ – ಇಂಗ್ಲೀಷ್ ಮತ್ತು ಕನ್ನಡ.
ಮಾ.15 ರಂದು – 5ನೇ ತರಗತಿ ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು. 8ನೇ ತರಗತಿ ತೃತೀಯ ಭಾಷೆ – ಹಿಂದಿ, ಹಿಂದಿ ( ಎನ್ ಸಿ ಆರ್ ಟಿ ), ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು.
ಮಾ.16 ರಂದು- 5ನೇ ತರಗತಿ ಕೋರ್ ವಿಷಯ – ಗಣಿತ, 8ನೇ ತರಗತಿ ಕೋರ್ ವಿಷಯ – ಗಣಿತ.
ಮಾ.17 ರಂದು – 5ನೇ ತರಗತಿ ಕೋರ್ ವಿಷಯ ಪರಿಸರ ಅಧ್ಯಯನ. 8ನೇ ತರಗತಿ ಕೋರ್ ವಿಷಯ ವಿಜ್ಞಾನ.
ಮಾ.18 ರಂದು – 5ನೇ ತರಗತಿ ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ. 8ನೇ ತರಗತಿ ಕೋರ್ ವಿಷಯ ಸಮಾಜ ವಿಜ್ಞಾನ.
ಮಾ.6 ರಿಂದ ಮಾ.10 ರ ವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷ ಶಾಳೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶ್ತೋತ್ತರ ಪತ್ರಿಕೆಗಳನ್ನೇ ಬಳಸಿ, ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸಿದಂತೆ ಮೌಲ್ಯಾಂಕನ ನಡೆಸುವುದಾಗಿ ತಿಳಿಸಿದೆ.