ಟರ್ಕಿಯಲ್ಲಿ ವಿಪತ್ತು ನಿರ್ವಹಣಾ ದಳದ ಕಾರ್ಯಚರಣೆ-ನಾಗರಿಕರಿಂದ ಶ್ಲಾಘನೆ

ಟರ್ಕಿ ಫೆ.23 : ಯಾವುದೇ ದೇಶ ಆಪತ್ತಿನಲ್ಲಿದ್ದಾಗ ಭಾರತ ದೇಶವು ಸಹಕಾರ ನೀಡುವಲ್ಲಿ ಎಂದೂ ಹಿಂದೇಟು ಹಾಕಿಲ್ಲ. ಇದೀಗ ಟರ್ಕಿಯಲ್ಲಿ ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ಭಾರತ ದೇಶದ ವಿಪತ್ತು ನಿರ್ವಹಣಾ ದಳ ನಡೆಸಿದ ಕಾರ್ಯಾಚರಣೆಗೆ ಆ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ದೇಶದ ವಿಪತ್ತು ನಿರ್ವಹಣಾ ದಳದ ತಂಡ, ಒಂದೇ ರಾತ್ರಿಯಲ್ಲಿ 140 ಮಂದಿಗೆ ಅಲ್ಲಿಗೆ ತೆರಳಲು ತುರ್ತಾಗಿ ಪಾಸ್‍ಪೋರ್ಟ್ ಒದಗಿಸಿದ ಪ್ರಕ್ರಿಯೆ, ಹಾಗೂ ಅಲ್ಲಿ ಕಳೆದ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ನೆರವು ನೀಡಲು ನಿರ್ಧರಿಸಿ “ಆಪರೇಷನ್ ದೋಸ್ತ್’ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತಿದ್ದಂತೆಯೇ ಎನ್.ಡಿ.ಆರ್.ಎಫ್ ನ 152 ಸಿಬ್ಬಂದಿಯ 3 ಎನ್.ಡಿಆರ್.ಎಫ್ ತಂಡ ಹಾಗೂ 6 ಸೇನಾ ಶ್ವಾನಗಳು. ಕೇವಲ 8 ಗಂಟೆಯ ಅವಧಿಯಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, 60ಕ್ಕೂ ಅಧಿಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪನೆ, 24 ಗಂಟೆಗಳ ಅವಧಿಯೂ 3,600ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ, ಶ್ವಾನದಳದಿಂದ ನಿರಂತರ ಹುಡುಕಾಟ ಹೀಗೆ ಫೆ. 7 ರಿಂದ ಫೆ.19ರ ವರೆಗೆ ಭಾರತದ ತಂಡ, ಟರ್ಕಿ ಜನರ ಜೀವ ಉಳಿಸಲು ಕೆಲಸ ಮಾಡಿದೆ. ಹಾಗೂ “ನಮಗಿನ್ನೂ ಟರ್ಕಿಯದ್ದೇ ಚಿಂತೆ, ಇನ್ನಷ್ಟು ಮಂದಿಯ ಜೀವವನ್ನು ಉಳಿಸಬಹುದಿತ್ತು ಎನ್ನುವ ಭಾವ ಕಾಡುತ್ತಲೇ ಇದೆ’ ಎಂದು ಹೇಳಿಕೊಂಡಿದೆ.

ಟರ್ಕಿ ಜನರು ನಮ್ಮ ಸೇವೆಗೆ ಪ್ರತಿಯಾಗಿ ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದರು. ನಮ್ಮನ್ನು ಅಪ್ಪಿ, ಸಹಾಯ ಮರೆಯುವುದಿಲ್ಲವೆಂದರು. ನಮ್ಮ ಕುಟುಂಬಸ್ಥರೇ ಸಂಕಟದಲ್ಲಿ ಸಿಕ್ಕ ಅನುಭವ ಆಗಿತ್ತು ಎಂದು ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!