ವಿಟ್ಲ: ಮಿತ್ತೂರಿನ ಫ್ರೀಡಂ ಹಾಲ್ ಸೀಝ್ ಮಾಡಿದ ಎನ್.ಐ.ಎ

ವಿಟ್ಲ ಫೆ.23 : ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಆರೋಪದ ಮೇಲೆ, ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಹಾಲ್‍ಗೆ ಬೀಗ ಜಡಿಯಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಎನ್.ಐ.ಎ ಅಧಿಕಾರಿ ಷಣ್ಮುಗಂ. ಎಂ ಅವರು ಅಧಿಕೃತವಾಗಿ ನೋಟಿಸ್ ಹೊರಡಿಸಿ ಮಾಹಿತಿ ನೀಡಿದ್ದು, ಮಿತ್ತೂರು ಫ್ರೀಡಮ್ ಹಾಲ್ ನ ಎಲ್ಲಾ ಆಸ್ತಿಯನ್ನು ಜಪ್ತಿ ಮಾಡಲು, ಎನ್.ಐ.ಎ ಅಥವಾ ಗೊತ್ತುಪಡಿಸಿದ ಪ್ರಾಧಿಕಾರದ ಪೂರ್ವಾನುಮತಿ ಹೊರತುಪಡಿಸಿ ಯಾವುದೇ ರೀತಿಯಲ್ಲಿ ಹೇಳಲಾದ ಆಸ್ತಿಯನ್ನು ವರ್ಗಾಯಿಸಲು, ಗುತ್ತಿಗೆಗೆ, ವಿಲೇವಾರಿ ಮಾಡಲು, ಅದರ ಸ್ವರೂಪವನ್ನು ಬದಲಾಯಿಸಲು ಅಥವಾ ವ್ಯವಹರಿಸಲು ನಿಷೇಧವನ್ನು ಹೇರಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!