ಮುಸ್ಲಿಂ ದಂಪತಿಗೆ ವಕ್ಫ್ ಮಂಡಳಿಯಿಂದ ವಿವಾಹ ಪ್ರಮಾಣ ಪತ್ರ ಲಭ್ಯ

ಬೆಂಗಳೂರು ಫೆ.23 : ಇನ್ನು ಮುಂದೆ ರಾಜ್ಯದ ಮುಸ್ಲಿಂ ದಂಪತಿಗೆ ವಕ್ಫ್ ಮಂಡಳಿಯಿಂದ ವಿವಾಹ ಪ್ರಮಾಣ ಪತ್ರ ದೊರೆಯಲಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಿ. ಎಚ್. ಅಬ್ದುಲ್ ಮುತ್ತಲಿ ವಂಡ್ಸೆ ಅವರು ಪ್ರಕಟಣೆ ಮೂಲಕ ಮಾಹಿತಿ ನಿಡಿದ್ದು, ವಿಕಾಸ ಸೌಧದಲ್ಲಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ನಡೆದ ವಕ್ಫ್ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ವಕ್ಫ್ ನಿಂದ ನೀಡಲಾಗುತ್ತಿದ್ದ ವಿವಾಹ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಹೈದರಾಬಾದ್ ಕರ್ನಾಟಕದ ಖಾಝಿ ಮುಹಮ್ಮದ್ ಹುಸೈನ್ ಸಿದ್ದೀಖಿ ಕರ್ನಾಟಕ ಹೈಕೋರ್ಟ್‍ನ ಕಲಬುರಗಿ ಪೀಠದಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ವಕ್ಫ್ ನಿಂದ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ತಡೆ ಉಂಟಾಗಿತ್ತು. ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಪ್ ಮಂಡಳಿಯ ಪರಿಶ್ರಮದಿಂದ ಸರಕಾರದ ಅಧೀನ ಕಾರ್ಯದರ್ಶಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಬೆಂಗಳೂರು ಇವರ ಆದೇಶದ ಮೇರೆಗೆ ಇನ್ನು ಮುಂದೆ ಮುಸ್ಲಿಂ ದಂಪತಿಗಳಿಗೆ ವಿವಾಹ ಪ್ರಮಾಣ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!