ಕರ್ತವ್ಯದಿಂದ ಡಿ ಗ್ರೇಡ್- ನರ್ಸ್‍ನಿಂದ ಬೆತ್ತಲೆ ಪ್ರತಿಭಟನೆ
ರಾಜಸ್ಥಾನ ಫೆ.23 : ಇಲ್ಲಿನ ಜೈಪುರದ ಎಸ್.ಎಂ.ಎಸ್ ಆಸ್ಪತ್ರೆಯ ನರ್ಸ್ ಒಬ್ಬರು ಆಸ್ಪತ್ರೆಯ ಹೊರಗೆ ಬೆತ್ತಲಾಗಿ ನಿಂತು ಪ್ರತಭಟನೆ ನಡೆಸಿದ ಘಟನೆ ನಡೆದಿದೆ.
ಈಕೆ ಅಜೀರ್ ಜಿಲ್ಲೆಯ ಬಿವಾರ್ ಪಟ್ಟಣದ 36 ವರ್ಷದ ಮಹಿಳೆಯಾಗಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಪುರದ ಆಸ್ಪತ್ರೆಯಲ್ಲಿ ಎ.ಎನ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯಲೋಪದ ಹಿನ್ನೆಲೆ ಶಿಸ್ತು ಕ್ರಮದ ಭಾಗವಾಗಿ ಆಕೆಯನ್ನು ಡಿ-ಗ್ರೇಡ್ ಮಾಡಿ ಎ.ಪಿ.ಒ ಆಗಿ ನೇಮಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ಮಹಿಳೆ, ಬೆತ್ತಲೆ ನಿಂತು ಪ್ರತಿಭಟಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.