ಉತ್ತರಾಖಂಡ್ ನಲ್ಲಿ ಯಾವುದೇ ಕ್ಷಣದಲ್ಲಿ ಭೂಕಂಪ ಸಾಧ್ಯತೆ-ಭೂಗರ್ಭ ಶಾಸ್ತ್ರಜ್ಞ ರಾಮಚಂದ್ರ ರಾವ್ ಎಚ್ಚರಿಕೆ
ನವದೆಹಲಿ ಫೆ.22 : ಯಾವುದೇ ಕ್ಷಣದಲ್ಲಿ ಉತ್ತರಾಖಂಡ್ ನಲ್ಲಿ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಎನ್.ಜಿ.ಆರ್.ಐ ಮುಖ್ಯ ವಿಜ್ಞಾನಿ, ಭೂಗರ್ಭ ಶಾಸ್ತ್ರಜ್ಞ ರಾಮಚಂದ್ರ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.
ಇದು ಎಚ್ಚರಿಕೆಯ ಕರೆ ಗಂಟೆ ಎಂದಿರುವ ಅವರು, ಭೂಮಿಯ ತಳದಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಭಾರತದ ಪ್ಲೇಟ್ ಗಳು ವರ್ಷಕ್ಕೆ ಐದು ಸೆಂಟಿಮೀಟರ್ ಚಲಿಸುತ್ತಿವೆ. ಇದರ ಪರಿಣಾಮ ಅತೀವ ಒತ್ತಡ ಸೃಷ್ಟಿಯಾಗುತ್ತಿದೆ. ಇದು ಭೂಕಂಪನಕ್ಕೆ ದಾರಿ ಮಾಡಿಕೊಡಲಿದೆ ಎಂದು ಮಾಹಿತಿ ನೀಡಿದ್ದಾರೆ.