ಹಿಂದುಗಳು ಮುಸ್ಲಿಂ ಸಮುದಾಯದೊಂದಿಗೆ ಹೊಂದಿಕೊಳ್ಳಬೇಕು ಎಂಬುದು ತಪ್ಪು ಹೇಳಿಕೆ-ಪ್ರಮೋದ್ ಮುತಾಲಿಕ್
ಬಾಗಲಕೋಟೆ,ಫೆ.20 : ಹಿಂದುಗಳು ಮುಸ್ಲಿಂ ಸಮುದಾಯದೊಂದಿಗೆ ಹೊಂದಿಕೊಳ್ಳಬೇಕು ಎಂಬುದು ತಪ್ಪು ಹೇಳಿಕೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದ ವ್ಯಕ್ತಿಯೊಬ್ಬರು ಹಿಂದುಗಳು ಮುಸ್ಲಿಂ ಸಮುದಾಯದೊಂದಿಗೆ ಹೊಂದಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ತಪ್ಪು ಹೇಳಿಕೆ. ಗೋಹಂತಕರೊದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ ಎಂದರು.
ಹಿಂದು ಯುವತಿಯರನ್ನು ಮೋಸದ ಬಲೆಗೆ ಬೀಳಿಸಿ ಲವ್ ಜಿಹಾದ್ ನಡೆಸಲಾಗುತ್ತಿದೆ. ಅವರು ನಮ್ಮ ಒಬ್ಬ ಯುವತಿಯನ್ನು ಮದುವೆ ಮಾಡಿಕೊಂಡರೆ ಹಿಂದು ಯುವಕರು ಅವರ ಸಮುದಾಯದ ಹತ್ತು ಯುವತಿಯರನ್ನು ಬಲೆಗೆ ಬೀಳಿಸಿ ಮದುವೆ ಆಗಬೇಕು. ಯುವಕರನ್ನು ರಕ್ಷಿಸುವ ಜವಾಬ್ದಾರಿ ಶ್ರೀರಾಮ ಸೇನೆ ಮೇಲೆ ಇರಲಿದೆ. ನಮ್ಮ ಸಂಪ್ರದಾಯದಂತೆ ಆತ್ಮ ರಕ್ಷಣೆಗಾಗಿ ಎಲ್ಲರ ಮನೆಗಳಲ್ಲಿ ತಲವಾರ್ ಇರಬೇಕು. ಪೊಲೀಸರು ನಿಮ್ಮನ್ನು ಕೇಳಿದರೆ ದುರ್ಗಾದೇವಿ ಕೈಯಲ್ಲಿ ಖಡ್ಗವಿದೆ ಎಂದು ಹೇಳಬೇಕು ಎಂದರು. ಹಿಂದು ಬಾಂಧವರು ಹಿಂದುಗಳ ಬಳಿ ವ್ಯಾಪಾರ, ವಹಿವಾಟು ನಡೆಸಿ. ಹಿಂದುಗಳ ಮೇಲಿನ ದಬ್ಬಾಳಿಕೆ ವಿರುದ್ಧ ಹಿಂದು ಸಂಘಟನೆಗಳು ಶ್ರಮಿಸುತ್ತಿವೆ. ಎಲ್ಲರೂ ಸಂಘಟನೆಗಳಿಗೆ ಕೈಜೋಡಿಸಿ. ಅಂದು ಶಿವಾಜಿ ಮಹಾರಾಜರು ಇರದಿದ್ದರೆ ಇಂದು ನಾವೆಲ್ಲ ಹಿಂದುಗಳಾಗಿ ಇರುತ್ತಿರಲಿಲ್ಲ. ಮೊಘಲರು, ಸುಲ್ತಾನರನ್ನು ಮೆಟ್ಟಿ ಶಿವಾಜಿ ಮಹಾರಾಜರು ಹಿಂದು ಸಾಮ್ರಾಜ್ಯದ ಪ್ರತಿಜ್ಞೆ ಮಾಡಿದರು. ಇಂದು ನಾವೆಲ್ಲ ಶಿವಾಜಿಯವರ ಹಾದಿಯಲ್ಲಿ ಸಾಗಬೇಕಿದೆ ಎಂದು ಕರೆ ನೀಡಿದರು.
ನಮ್ಮ ಉತ್ಸವಗಳಲ್ಲಿ ಡಿಜೆ ಬಳಸಬೇಡಿ ಎನ್ನುವ ಪೊಲೀಸರು ಅವರ ಮಸೀದಿಗಳ ಮೇಲಿನ ಮೈಕ್ ಕಿತ್ತಿಸುವುದಿಲ್ಲ. ಮೊದಲು ಹಲಾಲ್, ಹಿಜಾಬ್ ನಿಲ್ಲಬೇಕು. ನಮ್ಮ ಗೋವು ತಾಯಿಯನ್ನು ಉಳಿಸಿಕೊಳ್ಳಲು ನಮಗೆ ಹೊಂದಾಣಿಕೆ ಬೇಕಿಲ್ಲ. ಗೋಹತ್ಯೆಯಿಂದ ಗೋವಿನ ಮಾಂಸ, ರಕ್ತ ರಫ್ತಾಗುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರೂ ಮತಾಂತರ ಸ್ಥಗಿತಗೊಂಡಿಲ್ಲ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.